ಮನರಂಜನೆ

ರಾಣ ನ ಹಾಡಿಗೆ ರಾಗಿಣಿ ಹೆಜ್ಜೆ

ರಾಣ ನ ಹಾಡಿಗೆ ರಾಗಿಣಿ ಹೆಜ್ಜೆ

ಬೆಂಗಳೂರು, ಅ. 11: ಶ್ರೇಯಸ್ಸ್ ಕೆ ಮಂಜು ಅಭಿನಯದ  ರಾಣ ಚಿತ್ರದ  ಹಾಡೊಂದಕ್ಕೆ ನಟಿ ರಾಗಿಣಿ ಹೆಜ್ಜೆ ಹಾಕಲಿದ್ದಾರೆ. ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ವಿಕ್ಟರಿ ಚಿತ್ರಕ್ಕಾಗಿ ಶಿವುಭೇರ್ಗಿ ಅವರು ಬರೆದಿದ್ದ "ಯಕ್ಕ ನಿನ್ನ ಮಗಳು ನನಗೆ ಹಾಡು ಈಗಲೂ ಜನಪ್ರಿಯವಾಗಿದೆ. ಈ ಹಾಡಿನಲ್ಲೂ ರಾಗಿಣಿ ಅಭಿನಯಿಸಿದ್ದರು. ಈಗ ರಾಣ ಚಿತ್ರಕ್ಕೂ ಶಿವು ಭೇರ್ಗಿ ಅವರು ಸೂಪರ್ ಡೂಪರ್ ಹಿಟ್ ಆಗುವ ಹಾಡೊಂದನ್ನು ಬರೆದಿದ್ದು, ರಾಗಿಣಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.  ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.  ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.  ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ.  ಶೇಖರ್ ಚಂದ್ರು ಛಾಯಾಗ್ರಹಣ  ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದ್ದು, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌. 

ಸುದ್ದಿ ಓದಿ