ರಘುವಂದ್ಯ ತೀರ್ಥರ ಆರಾಧನೆ ಮಹೋತ್ಸವ
ಲೋಕದರ್ಶನ ವರದಿ
ಕಂಪ್ಲಿ 22: ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ರಘುವಂದ್ಯ ತೀರ್ಥರ ಆರಾಧನೆ ಮಹೋತ್ಸವ ಭಕ್ತಿಭಾವದಿಂದ ಜರುಗಿತು. ಆರಾಧನೆ ನಿಮಿತ್ತ ಬೃಂದಾವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲಾದಲ್ಲಿ ಕೂಡ್ಲಿ ಆರ್ಯ ಅಕ್ಷೋಭ್ಯ ಮಠಾಧೀಶ 1008 ರಘುವಿಜಯ ತೀರ್ಥ ಪಾದಂಗಳವರುಆಶೀರ್ವಚನ ನೀಡಿದರು.ವಿಶ್ವ ಮಧ್ವಮತ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣ ವೈದ್ಯರು, ಅಸೋಸಿಯೇಷನ್ ಸಂಘಟನೆ ಜಿಲ್ಲಾ ಅಧ್ಯಕ್ಷ ಶ್ರೀನಿವಾಸಾಚಾರ್ಯ ಗಂಗೂರ, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ನರಸಿಂಹಾಚಾರ್ಯ ಹೊಳಗುಂದಿ ಮತ್ತು ಭಕ್ತರು ಭಾಗವಹಿಸಿದ್ದರು.