ಹಗರಿಬೊಮ್ಮನಹಳ್ಳಿ

ಛಾಯಾಗ್ರಾಹಕರ ಸಂಘಕ್ಕೆ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

ಛಾಯಾಗ್ರಾಹಕರ ಸಂಘಕ್ಕೆ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

ಹಗರಿಬೊಮ್ಮನಹಳ್ಳಿ 14: ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ಅಧ್ಯಕ್ಷರಾಗಿ ಹೆಚ್‌.ಎಂ. ರಾಘವೇಂದ್ರ ಅವರು ಆಯ್ಕೆಯಾಗಿದ್ದಾರೆ. 

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್‌.ಎಂ.ರಾಘವೇಂದ್ರ, ಸಂತೋಷ ಹಾಗೂ ಕೆ.ರಾಘವೇಂದ್ರ ಸ್ಪರ್ಥಿಸಿದ್ದು ಪ್ರಥಮ ಬಾರಿಗೆ ವೋಟಿಂಗ್ ಮಾಡುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು ಇದರಲ್ಲಿ ಹೆಚ್‌.ಎಂ.ರಾಘವೇಂದ್ರ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಉಳಿದ  ಪದಾಧಿಕಾರಿಗಳನ್ನು ಸರ್ವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ಪೋಟೋ ರಾಮಣ್ಣ, ಉಪಾಧ್ಯಕ್ಷರಾಗಿ ಕೆ.ರಾಘವೇಂದ್ರ, ಬಿ.ಎಂ.ರಾಜು, ಕಾರ್ಯದರ್ಶಿಯಾಗಿ ವೀರೇಶ್ ಕೆ, ಸಹ ಕಾರ್ಯದರ್ಶಿಯಾಗಿ ನಾಗರಾಜ ಕಲ್ಮನಿ, ಖಾಜಾಂಚಿಯಾಗಿ ಸಂತೋಷ್ ಪೂಜಾರ್, ಸಹ ಖಜಾಂಚಿಯಾಗಿ ಲೋಕ್ಯಾನಾಯ್ಕ್‌, ಸಂಘಟನ ಕಾರ್ಯದರ್ಶಿಯಾಗಿ ಹೀರಾಳ್ ವಿಶ್ವನಾಥ್ ಸೇರಿದಂತೆ ಸಂಚಾಲಕ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. 

ರಾಜ್ಯ ಛಾಯಾಗ್ರಾಹಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಜಾಧವ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಜರುಗಿತು. ಈ ಸಂಧರ್ಭದಲ್ಲಿ ಛಾಯಾಗ್ರಾಹಕರಾದ ಅಂಬಳಿ ಪ್ರತೀಕ್, ರವಿ ಕುಮಾರ್, ವೇದಮೂರ್ತಿ, ಯುವರಾಜ್, ಹಾಲಸ್ವಾಮಿ, ಮಂಜುನಾಥ್, ಮಾಲವಿ ಜಗದೀಶ್, ಅಜೇಯ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ