ವಿಜಯಪುರ

29ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

29ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಚಡಚಣ 27 : ಜೀರಂಕಲಗಿ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 29 ರಿಂದ 31ರವರೆಗೆ ಗುರು ರಾಘವೇಂದ್ರ ಮಹಾಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಜರುಗಲಿದೆ.  ಆ. 29 ಶನಿವಾರದಂದು ಪೂರ್ವಾರಾಧನೆ ನಿಮಿತ್ಯ ಬೆಳಗ್ಗೆ 7ಕ್ಕೆ ಗೋಪೂಜೆ, 8ಕ್ಕೆ ಸಮೀರಾಚಾರ್ಯ ಇವರಿಂದ ಪವಮಾನ ಹೋಮ, 10ಕ್ಕೆ ರವಿಕಾಂತ ಜಹಾಗೀರದಾರ ಇವರಿಂದ ಶ್ರೀ ಹರಿವಾಯು ಸ್ತುತಿ, ಅಷ್ಟೋತ್ತರ, ಕ್ಷೀರಾಭಿಷೇಕ, ಪಂಚಾಮೃತ, ಅಲಂಕಾರ 12ಗಂಟೆಗೆ ಪೂಜಾ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಮಹಾಪ್ರಸಾದ, ರಾತ್ರಿ 10ಕ್ಕೆ ಸ್ಥಳೀಯ ಭಜನಾ ಮಂಡಳಿಯಿಂದ ತಾರತಮ್ಯೋಕ್ತ ಭಜನೆ ಜರುಗಲಿದೆ. 

ಆ. 30 ರವಿವಾರ ಬೆಳಗ್ಗೆ 7 ಗಂಟೆಗೆ ಪೂಜಾ, ಅಷ್ಟೋತ್ತರ, ಅಲಂಕಾರ, 10 ಗಂಟೆಗೆ ರಾಘವೇಂದ್ರ ಕುಲಕರ್ಣಿ ಇವರ ನೇತೃತ್ವದಲ್ಲಿ ಪಲ್ಲಕ್ಕಿ ಸೇವೆಯೊಂದಿಗೆ ಗ್ರಾಮ ಪ್ರದಕ್ಷಿಣೆ, 12 ಗಂಟೆಗೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ,  ಮಹಾಪ್ರಸಾದ, ಸಂಜೆ 7 ಗಂಟೆಗೆ ಜೀರಂಕಲಗಿ ಗ್ರಾಮದ ಸರ್ವೋತ್ತಮಾಚಾರ್ಯ ಜೋಶಿ, ಕೇಶವಾಚಾರ್ಯ ಕುಲಕರ್ಣಿ, ಸಮೀರಾಚಾರ್ಯ ಕುಲಕರ್ಣಿ, ಸರ್ವಜ್ಞ ವಿಹಾರ ವಿದ್ಯಾಪೀಠ ವಿಜಯಪುರದ ಸತ್ಯವರಾಜಾಚಾರ್ಯ ಜೋಶಿ, ಗುರುರಾಜಾಚಾರ್ಯ ಕುಲಕರ್ಣಿ ಇವರಿಂದ ಪ್ರವಚನ, ರಾತ್ರಿ 10ಕ್ಕೆ ಸ್ಥಳೀಯ ಭಜನಾ ಮಂಡಳಿಯಿಂದ ತಾರತಮ್ಯೋಕ್ತ ಭಜನೆ ಜರುಗಲಿದೆ. 

ಆ. 31 ಸೋಮವಾರ ಬೆಳಗ್ಗೆ 7 ಗಂಟೆಗೆ ಪೂಜಾ, ಅಷ್ಟೋತ್ತರ, ಅಲಂಕಾರ, 10 ಗಂಟೆಗೆ ರಾಘವೇಂದ್ರ ಕುಲಕರ್ಣಿ ಇವರ ನೇತೃತ್ವದಲ್ಲಿ ಪಲ್ಲಕ್ಕಿ ಸೇವೆಯೊಂದಿಗೆ ಗ್ರಾಮ ಪ್ರದಕ್ಷಿಣೆ, 12 ಗಂಟೆಗೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಸಾಯಂಕಾಲ 6 ಗಂಟೆಗೆ  ಕೇಶವಾಚಾರ್ಯ ಕುಲಕರ್ಣಿ, ಸಮೀರಾಚಾರ್ಯ ಕುಲಕರ್ಣಿ ಇವರಿಂದ ಪ್ರವಚನ, ರಾತ್ರಿ 9 ಗಂಟೆಗೆ ಆಭಾರ ಮನ್ನಣೆ, ಮಹಾಮಂಗಳಾರತಿಯೊಂದಿಗೆ ಮೂರು ದಿನಗಳ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ