ಮುಂದಗೋಡ

ಮುಂಡಗೋಡ ತಹಸೀಲ್ದಾರ್ ಶಂಕರ್ ಗೌಡಿಗೆ ಆರ್ ವಿ ದೇಶಪಾಂಡೆ ತರಾಟೆ

ಮುಂಡಗೋಡ ತಹಸೀಲ್ದಾರ್ ಶಂಕರ್ ಗೌಡಿಗೆ ಆರ್ ವಿ ದೇಶಪಾಂಡೆ ತರಾಟೆ

ಮುಂಡಗೋಡ 15: ಮುಂಡಗೋಡ ತಾಲೂಕಿನ ಪ್ರವಾಸಿ ಮಂದಿರಕ್ಕೆ ತೆರಳಿದ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಜನರ ಬಳಿ ಅಹವಾಲುಗಳನ್ನು ಸ್ವೀಕರಿಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ್ಮ ಅಳಲನ್ನು ದೇಶಪಾಂಡೆಯವರ ಬಳಿ ತೋಡಿಕೊಳ್ಳಲು ಆಗಿಮಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಆಗಮಿಸದ ತಹಶಿಲ್ದಾರ್ ಶಂಕರ್ ಗೌಡಿಗೆ ಆರ್ ವಿ ದೇಶಪಾಂಡೆ ತರಾಟೆಗೆ ತೆಗೆದುಕೊಂಡರು.  

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಶಂಕರ್ ಗೌಡಿ ಅಗಮಿಸಿರಲಿಲ್ಲ, ಇದರಿಂದ ಆರ್ ವಿ ದೇಶಪಾಂಡೆಯವರು ಕೋಪಿಸಿಕೊಂಡು ತಹಶೀಲ್ದಾರ್‌ಗೆ ಕರೆ ಮಾಡಿ ನಾನೇನು ದನ ಕಾಯಲು ಇಲ್ಲಿಗೆ ಬಂದಿದ್ದೇನಾ, ಜನರ ಸಮಸ್ಯೆಯನ್ನು ಬಗೆಹರಿಸುವುದು ಬಿಟ್ಟು ಎಲ್ಲಿದ್ದೀಯ ನೀನು,?  ನಿನ್ನ ಮೇಲೆ ಕಂದಾಯ ಸಚಿವರಿಗೆ ದೂರು ಕೊಡುತ್ತೇನೆ ಎಂದು ಆರ್ ವಿ ದೇಶಪಾಂಡೆ ತಾಲೂಕಾ ದಂಡಾಧಿಕಾರಿ ಶಂಕರ್ ಗೌಡಿ ಮೇಲೆ ಗರಂ ಆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ ಎಸ್  ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ