ದಸರಾಗೆ RRR ರಿಲೀಸ್
ಬೆಂಗಳೂರು, ಜ 25 :ಬಹುನಿರೀಕ್ಷಿತ ‘ರೌದ್ರ ರಣ ರುಧಿರ’ RRR ಚಿತ್ರ ದಸರಾ ಹಬ್ಬದ ವೇಳಗೆ ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ. ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಅಕ್ಟೋಬರ್ 13ರಂದು ತೆರೆಕಾಣಲಿದೆ. ಜ್ಯೂನಿಯರ್ ಎನ್.ಟಿ.ಆರ್ , ರಾಮ್ ಚರಣ್, ಅಜಯ್ ದೇವಗನ್, ಅಳಿಯ ಭಟ್, ಸಮುಥಿರಕಿಣಿ ಮುಂತಾದವರ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ. ಪಿರಿಯಡ್ ಆಕ್ಷನ್ ಡ್ರಾಮಾ ಇದಾಗಿದ್ದು, ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಕಥೆಯಾಗಿದೆ. ಡಿ.ವಿ.ವಿ. ದಾನಯ್ಯ ಈ ಚಿತ್ರದ ನಿರ್ಮಾಪಕರು.