ಚುನಾವಣೆಯಲ್ಲಿ ಬಿಜೆಪಿಯ ಜೊತೆ ಆರ್ಪಿಐ ಮೈತ್ರಿ: ವೆಂಕಟರಮಣಪ್ಪ
ಬಳ್ಳಾರಿ:ಮಾ 20: ವಿಧಾನ ಸಭಾ ಚುನಾವಣೆ ಮೇ-2023 ರ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಆರಿ್ಪ.ಐ ಪೂರ್ಣ ಬೆಂಬಲ ನೀಡಿದೆ. ಹಾಗೂ ಇದೇ ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ರಾಜ್ಯ ಸಮಿತಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಸಿ, ಅದು ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಚಾರ ನಡೆಸಲು ನಿರ್ಧರಿಸಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಕ್ಷ ಘೋಷಿಸಿದೆ.
ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟರಮಣಪ್ಪ ಅವರು ಇದೇ ತಿಂಗಳ 15 ರಂದು ನಡೆದ ಕಾರ್ಯಕ್ರಮದ ಬೆಂಗಳೂರಿನಲ್ಲಿ ನಡೆದ ಅರಿ್ಪ.ಐ ನ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಈ ನಿರ್ಣಯವನ್ನು ಕೈಗೊಂಡಿದೆ. ವಂಶಾಡಳತ ರಾಜಕಾರಣದ ಕಾಂಗ್ರೆಸ್ ಮತ್ತು ಕುಟುಂಬ ರಾಜಕಾರಣ ಜೆ.ಡಿ.(ಎಸ್) ಪಕ್ಷಗಳು 2023 ರ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಂತೆ ಆರಿ್ಪ.ಐ ತನ್ನ ಎಲಾ ಪ್ರಯತ್ನವನ್ನು ಮಾಡುತ್ತದೆ. ರಾಜ್ಯದ 31 ಜಿಲ್ಲೆಗಳಲ್ಲೂ ನಮ್ಮ ಪಕ್ಷವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು ಎಸ್.ಸಿ/ ಎಸ್.ಐ ಮತ್ತೀತರ ಶೋಷಿತ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಅಥವಾ ಜೆ.ಡಿ.(ಎಸ್) ಪಕ್ಷಗಳ ಅಭ್ಯರ್ಥಿಗಳಿಗೆ ಹೋಗದೇ ಬಿ.ಜೆ.ಪಿ. ವಿಧಾನ ಸಭೆ ನಿರ್ಮಾಣ ಆಗದ ರೀತಿಯಲ್ಲಿ ಬಿ.ಜೆ.ಪಿ. ಪರ ಮತಗಳು ಧೃವೀಕರಣ ಸಾಧ್ಯವಾಗಬೇಕೆಂದು ಹೇಳಿದರು.
ಅದೇ ರೀತಿಯಾಗಿ ನಮ್ಮ ಪಕ್ಷದ ಸ್ಪಷ್ಟವಾದ ನಿಲುವು ಶೋಷಿತ ಸಮುದಾಯಗಳ ಪ್ರಥಮ ಶತ್ರು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು, ಎಂದು ಕಾಂಗ್ರೇಸ್-ಜೆ.ಡಿ(ಎಸ್) ಮೈತ್ರಿ ಸರ್ಕಾರವು ಸಹ ರಚನೆ ಆಗಬಾರದೆಂದು ಭರವಸೆ ಹೊಂದಿದ್ದೇನೆ.
ಮೈತ್ರಿ : ಕೇಂದ್ರದಲ್ಲಿ ನಮ್ಮ ಪಕ್ಷವು ಎನ್.ಡಿ.ಎ ಜೊತೆ ಮೈತ್ರಿ ಹೊಂದಿದೆ ಕನಾರ್ಟಕದಲ್ಲೂ ಸಹ ನಮ್ಮ ಪಕ್ಷ ಬಿ.ಜೆ.ಪಿಯೊಂದಿಗೆ ಮೈತ್ರಿಯನ್ನು ಬಯಸಿದೆ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಶಾಸಕರಿರುವ ಕ್ಷೇತ್ರಗಳಲ್ಲಿ ಆರಿ್ಪ.ಐ ಸ್ಪರ್ದಿಸಲು ಇಚ್ಚಿಸಿರುತ್ತದೆ 10-12 ಕ್ಷೇತ್ರಗಳನ್ನು ನಮ್ಮ ಪಕ್ಷಕ್ಕೆ ಭರವಸೆ ನೀಡಿದೆ ಎಂದು ವೆಂಕಟರಮಣಪ್ಪ ಅವರು ಮಾತನಾಡಿದರು.
ಸುದ್ದಿ ಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಿ.ಸಿ.ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷ ಬಟ್ಟ ಎರೀಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಪ್ರಧೀಪ್, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ವೀರೆಶ್, ರಾಜ ಅಧ್ಯಕ್ಷರು ಕಾರ್ಮಿಕರ ಘಟಕ ಸದಸ್ಯರು ಇತರರು ಉಪಸ್ಥಿತರಿದ್ದರು.