ಮನರಂಜನೆ

ಮುಂದುವರಿದ “ರಾಬರ್ಟ್” ಮೋಡಿ

ಮುಂದುವರಿದ “ರಾಬರ್ಟ್” ಮೋಡಿ

ಬೆಂಗಳೂರು, ಮಾರ್ಚ್ 13:ಚಾಲೆಂಜಿಂಗ್ ಸ್ಟಾರ್ ಅಭಿನಯದ “ರಾಬರ್ಟ್” ಮೋಡಿ ಮುಂದುವರಿದಿದ್ದು, ಚಿತ್ರಮಂದಿರಗಳಲ್ಲಿ ಕುರ್ಚಿಗಳು ಭರ್ತಿಯಾಗಿವೆ. ದರ್ಶನ್ ರ ವಿವಿಧ ಗೆಟಪ್, ಭಾವಾಭಿನಯ, ಹಾಡು, ಫೈಟ್, ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂದು ಹಾಗೂ ನಾಳೆ ವೀಕೆಂಡ್ ನಲ್ಲಿಯೂ ಮೊದಲ ದಿನದ ಓಘವೇ ಮುಂದುವರಿದು ಹೆಚ್ಚಿನ ಗಳಿಕೆ ಪಡೆಯುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಮಲ್ಟಿಪ್ಲೆಕ್ಸ್ ನಲ್ಲಿ ಭರ್ಜರಿ ತೆರೆಕಂಡಿದ್ದ ಸಿನಿಮಾ ಮೊದಲ ದಿನ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿತ್ತು. ಎರಡನೇ ದಿನವೂ ರಾಜ್ಯದಲ್ಲಿ 12.78 ಕೋಟಿ ಕಲೆಕ್ಷನ್ ಮಾಡಿದ್ದು, ಎರಡೇ ದಿನಗಳಲ್ಲಿ 30.05 ಕೋಟಿ ಗಳಿಸಿ ದಾಖಲೆ ಸೃಷ್ಟಿಸಿದೆ.  ಹೀಗಾಗಿ ಶನಿವಾರ ಮತ್ತು ಭಾನುವಾರ ಇನ್ನೆಷ್ಟು ಗಳಿಕೆಯಾಗಲಿದೆ ಎಂಬ ಕುತೂಹಲ ಸೃಷ್ಟಿಸಿದೆ.ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲ ದಿನ 3.12 ಕೋಟಿ ರೂ ಬಂದಿತ್ತು. ಎರಡನೇ ದಿನ ಲೆಕ್ಕಾಚಾರ ಹಾಗೂ ವೀಕೆಂಡ್ ನಲ್ಲಾಗುವ ಗಳಿಕೆ ಬಗ್ಗೆ ಭಾರಿ ನಿರೀಕ್ಷೆಯಿದೆ. ಒಟಿಟಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಗಟ್ಟಿ ನಿರ್ಧಾರ ಮಾಡಿ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕ ಉಮಾಪತಿ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರತಂಡ ಖುಷಿಯಲ್ಲಿದೆ.


ಸುದ್ದಿ ಓದಿ