ಮಾ. 28ರಂದು ತಂಬ್ರಹಳ್ಳಿ ಬಂಡೇ ರಂಗನಾಥೇಶ್ವರ ರಥೋತ್ಸವ
ಹಗರಿಬೊಮ್ಮನಹಳ್ಳಿ 16: ತಾಲೂಕಿನ ತಂಬ್ರಹಳ್ಳಿ ಬಂಡೆ ರಂಗನಾಥೇಶ್ವರ ರಥೋತ್ಸವ ಮಾ.28ರಂದು ಜರುಗುವ ಹಿನ್ನಲೆಯಲ್ಲಿ ತೇರಿನ ಗಾಲಿಗಳನ್ನು ಹೊರಹಾಕುವ ಕಾರ್ಯಕ್ರಮ ನಡೆಯಿತು.ಎತ್ತಿನ ಬಂಡಿಯನ್ನು ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಾಯಿತು. ನೂತನ ಸಮಿತಿಯ ಪದಾಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಗನಾಥನ ಕೃಪೆಗೆ ಪಾತ್ರರಾದರು. ಈ ಕುರಿತು ಬಂಡೇ ರಂಗನಾಥ ಸಮಿತಿಯ ಅಧ್ಯಕ್ಷ ಬಸರಕೋಡು ಲಕ್ಷ್ಮಣ ಮಾತನಾಡಿ, ರಂಗನಾಥ ಉತ್ಸವ ಮೂರ್ತಿಯನ್ನು ಸಕಲ ವಾಧ್ಯಗೋಷ್ಠಿಗಳೊಂದಿಗೆ ಬೆಟ್ಟಕ್ಕೆ ಹೊಯ್ಯಲಾಗುವುದು. ನಂದಿಸ್ಥಾಪನೆ, ಗರುಡಪೂಜೆ, ಕಂಕಣಧಾರಣೆ, ದೇವತಾರ್ಚನೆ, ಅಭಿಷೇಕ ಕಾರ್ಯಕ್ರಮ ನಡೆಯುವವು. ರಥೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಮತ್ತು ಬೆಟ್ಟದ ಮೇಲಿರುವ ಗೋಪುರಗಳಿಗೆ ಸುಣ್ಣಬಣ್ಣ ಹಚ್ಚಿಸುವ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಸಮಿತಿಯ ಪದಾಕಾರಿಗಳು ಗ್ರಾಮಸ್ಥರು ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೆಟ್ಟವನ್ನು ಸ್ವಚ್ಚಗೊಳಿಸಿದ್ದಾರೆ ಎಂದು ತಿಳಿಸಿದರು.ದೇವಸ್ಥಾನ ಸಮಿತಿಯ ಕಾರ್ಯದರ್ಶಿ ರೆಡ್ಡಿ ಮಂಜುನಾಥ ಪಾಟೀಲ್, ಧರ್ಮಕರ್ತ ಉದಯ ಭಾಸ್ಕರ್ರಾವ್, ಖಜಾಂಚಿ ದೇವಿಪ್ರಸಾದ, ಉಪಾಧ್ಯಕ್ಷರಾದ ಗಂಗಾಧರಗೌಡ, ಸರಾಯಿ ಮಂಜುನಾಥ, ಕಡ್ಡಿ ಚನ್ನಬಸಪ್ಪ, ಸುಣಗಾರ ಮಂಜುನಾಥ, ಬಣಕಾರ ಕೊಟ್ರೇಶ, ಚಣ್ಣದ ರಾಚಪ್ಪ, ಎಸ್.ಎಂ.ಪ್ರಕಾಶ್, ಕರಿಬಸಯ್ಯ, ಶ್ರೀನಿವಾಸ, ಬಾಳಿಕಾಯಿ ಚಿದಾನಂದಪ್ಪ, ಗೌರಜ್ಜನವರ ಬಸವರಾಜಪ್ಪ, ತಳವಾರ ಸುರೇಶ, ಸಪ್ಪರದ ಬಾಬಣ್ಣ, ಯಲ್ಲಪ್ಪಗೌಡ ಪೂಜಾರ್, ಶಿವಮೂರ್ತೆಯ್ಯ ಇತರರಿದ್ದರು.