ಮನರಂಜನೆ

ರಾಮ್ ಚರಣ್ ಜನ್ಮದಿನದಂದು ‘ಆಚಾರ್ಯ’ ಪೋಸ್ಟರ್ ರಿಲೀಸ್

ರಾಮ್ ಚರಣ್ ಜನ್ಮದಿನದಂದು ‘ಆಚಾರ್ಯ’ ಪೋಸ್ಟರ್ ರಿಲೀಸ್

ಹೈದರಾಬಾದ್, ಮಾರ್ಚ್ 27: ನಟ ರಾಮ್ ಚರಣ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ  ಆಚಾರ್ಯ ಚಿತ್ರತಂಡ ಅವರನ್ನು ಅಭಿನಂದಿಸಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.ಮೆಗಾಸ್ಟಾರ್ ಚಿರಂಜೀವಿ ಮತ್ತು ನಟ ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರವನ್ನು ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ಧ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ.ಶನಿವಾರ ಬಿಡುಗಡೆಯಾದ ಹೊಸ ಪೋಸ್ಟರ್ ನಲ್ಲಿ ರಾಮ್ ಚರಣ್ ಮತ್ತು ಚಿರಂಜೀವಿ ಕೈಯಲ್ಲಿ ಬಂದೂಕ ಹಿಡಿದು ನಕ್ಸಲೈಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಇಬ್ಬರು ನಟರ ಅಭಿಮಾನಿಗಳನ್ನೂ ಆಕರ್ಷಿಸಿದೆ ತಂದೆ –ಮಗನ ಜೋಡಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.  ಚಿರಂಜೀವಿ ಅವರಿಗೆ ಜೋಡಿಯಾಗಿ ಕಾಜಲ್ ಹಾಗೂ ರಾಮ್ ಚರಣ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ.

  


ಸುದ್ದಿ ಓದಿ