ಮನರಂಜನೆ

ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಿದ ರಜನೀಕಾಂತ್‌...?

ವಿಶೇಷ  ವಿಮಾನದಲ್ಲಿ ಅಮೆರಿಕಾಗೆ ತೆರಳಿದ  ರಜನೀಕಾಂತ್‌...?

ಚೆನ್ನೈ,  ಜೂನ್‌ 15: ದಕ್ಷಿಣ ಭಾರತ  ಸೂಪರ್‌ಸ್ಟಾರ್‌  ರಜನಿಕಾಂತ್‌ ಮತ್ತೆ  ಅನಾರೋಗ್ಯಕ್ಕೊಳಗಾಗಿದ್ದಾರೆಯೇ..?   ಗೊತ್ತಿಲ್ಲ. ಆದರೆ,   ಈ ಕುರಿತ   ಸುದ್ದಿಗಳು  ವ್ಯಾಪಕವಾಗಿ ಹರಡುತ್ತಿವೆ.    ರಾಜಕೀಯ  ಪ್ರವೇಶಿಸುವುದಾಗಿ  ಹೇಳಿದ್ದ...  ಕೆಲ  ಸಮಯದ  ನಂತರ ಇದ್ದಕ್ಕಿದ್ದಂತೆ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ   ಸ್ಟೈಲ್‌ ಕಿಂಗ್‌   ರಜನಿಕಾಂತ್.    ರಾಜಕೀಯ ಪ್ರವೇಶಿಸುವುದಿಲ್ಲ  ಎಂದು  ಸ್ವತಃ   ತಳ್ಳಿಹಾಕಿದ್ದರು.   ಅಂದಿನಿಂದ  ಮತ್ತೆ  ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್  ಸಾಂಕ್ರಾಮಿಕದ  ಎರಡನೇ  ಅಲೆಯ  ಪರಿಣಾಮ  ಚಿತ್ರೀಕರಣ  ಸ್ಥಗಿತಗೊಂಡಿವೆ.  ಈಗ  ರಜನಿಕಾಂತ್‌ಇದ್ದಕ್ಕಿದ್ದಂತೆ ಅಮೆರಿಕಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದ್ದು .. ಅಭಿಮಾನಿಗಳೆಲ್ಲರೂ ಆತಂಕಕ್ಕೊಳಗಾಗಿದ್ದಾರೆ. ರಜನಿಕಾಂತ್‌ ಅಮೆರಿಕಾಗೆ  ತೆರಳಿರುವ ಸುದ್ದಿ ಅಭಿಮಾನಿಗಳಲ್ಲಿ  ಕಳವಳ  ಉಂಟುಮಾಡಿದೆ. ಆದರೆ, ರಜಿನಿಕಾಂತ್‌ ಅವರ ಅನಾರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳು  ಸತ್ಯವಲ್ಲ. ಅವರು  ಆರೋಗ್ಯ ವಾಗಿದ್ದಾರೆ  ಎಂದು  ವರದಿಯಾಗಿದೆ.  ರಜಿನಿಕಾಂತ್‌ ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ ಅಮೆರಿಕಾಕ್ಕೆ  ತೆರಳಿದ್ದಾರೆ. ಪ್ರಸ್ತುತ ಕೊರೊನಾ ಪರಿಸ್ಥಿತಿಗಳಲ್ಲಿ ವಿದೇಶ ಪ್ರಯಾಣಕ್ಕೆ ನಿರ್ಬಂಧಗಳಿವೆ. ಕೆಲವು ದಿನಗಳ ಹಿಂದೆ ರಜಿನಿಕಾಂತ್‌  ಅಮೆರಿಕಾ ತೆರಳು  ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.  ಕೇಂದ್ರ ಸರ್ಕಾರ ಅನುಮತಿ ನೀಡಿದ  ನಂತರ  ಸೋಮವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕುಟುಂಬ ಸದಸ್ಯರೊಂದಿಗೆ  ಅಮೆರಿಕಾಗೆ ತೆರಳಿದ್ದಾರೆ.  ಆರೋಗ್ಯ ತಪಾಸಣೆಯ ನಂತರ ಕೆಲವು ದಿನಗಳವರೆಗೆ   ಅಮೆರಿಕಾದಲ್ಲಿದ್ದು, ವಿಶ್ರಾಂತಿ ಪಡೆದ ನಂತರ ಭಾರತಕ್ಕೆ ಹಿಂತಿರುಗುವ ಮಾಹಿತಿ ಲಭ್ಯವಾಗಿದೆ.


ಸುದ್ದಿ ಓದಿ