ಮನರಂಜನೆ

ತಂದೆಯ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಜೂನಿಯರ್ ಚಿರು

ತಂದೆಯ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಜೂನಿಯರ್ ಚಿರು

ಬೆಂಗಳೂರು, ಫೆ 19 :ಚಿರಂಜೀವಿ ಸರ್ಜಾ ಅವರು ಬಹಳ ಇಷ್ಟಪಟ್ಟು ನಟಿಸಿದ್ದ ‘ರಾಜಾ ಮಾರ್ತಾಂಡ’ ಚಿತ್ರ ಟ್ರೇಲರ್ ಬಿಡುಗಡೆಯಾಗಿದೆ. ಜೂನಿಯರ್ ಚಿರು ಅಮೃತ ಹಸ್ತದಿಂದ ಚಟ್ರೈಲರ್ ಬಿಡುಗಡೆಯಾಗಿರುವುದು ವಿಶೇಷ.  “ಬಹುಶಃ ತಂದೆಯ ಚಿತ್ರದ ಟ್ರೇಲರ್ ಅನ್ನು ಮಗ ಬಿಡುಗಡೆಗೊಳಿಸಿರುವುದು ಇದೇ ಮೊದಲು” ಎಂದು ಮೇಘನಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತದೊಡನೆ ಚಿರುನನ್ನು ಮತ್ತೊಮ್ಮೆ ಲವರ್ ಬಾಯ್‌ ಆಗಿ ಈ ಚಿತ್ರದಲ್ಲಿ ಕಾಣಬಹುದು. ಚಿರು ಚಿತ್ರದಲ್ಲಿ ವಿಭಿನ್ನ ಸ್ಟಂಟ್‌ ಮಾಡುವುದರ ಜತೆಗೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಕಂಠದಾನ ಕೂಡ ಚಿರು ಅಭಿನಯಕ್ಕೆ ಹೊಂದಿಕೊಂಡಿದೆ.“ರಾಜಾ ಮಾರ್ತಾಂಡ ಚಿತ್ರ ನಮ್ಮ ಕುಟುಂಬಕ್ಕೆ ತುಂಬಾನೇ ಸ್ಟೆಷಲ್. ಚಿರು ಅಭಿನಯಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.  ಜೂನಿಯರ್ ಚಿರು ಟ್ರೇಲರ್ ರಿಲೀಸ್ ಮಾಡುತ್ತಿರುವುದು ಖುಷಿಯಾಗಿದೆ” ಎಂದು ಮೇಘನಾ ಹೇಳಿದ್ದಾರೆ.



ಸುದ್ದಿ ಓದಿ