ರೈಲ್ವೆ ಟಿಕೆಟ್ ನೀಡಿಕೆಯಲ್ಲಿ ಬದಲಾವಣೆ ಇಲ್ಲ: ಸ್ಪಷ್ಟನೆ
ನವದೆಹಲಿ, ಡಿ 14: ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ನೀಡುವಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರೈಲ್ವೆ ತಿಳಿಸಿದೆ.ಹಬ್ಬದ ಸಂದರ್ಭಗಳಲ್ಲಿ ವಿಶೇಷ ರೈಲು ಸೇರಿದಂತೆ ಎಲ್ಲಾ ರೈಲುಗಳಲ್ಲಿ ಟಿಕೆಟ್ ಹಂಚಿಕೆ ಯಥಾ ಪ್ರಕಾರ ನಡೆಯಲಿದೆ. ಆದರೆ ಕೆಲವು ಮಾಧ್ಯಮಗಳಲ್ಲಿ ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನು ವಿತರಿಸುವ ಬಗ್ಗೆ ಬಿತ್ತರವಾಗಿರುವ ಸುದ್ದಿ ಸತ್ಯಕ್ಕೆ ದೂರ ಎಂದು ರೈಲ್ವೆ ಸಚಿವಾಲಯ ಹೇಳಿದೆ.ವಿಭಾಗೀಯ ರೈಲ್ವೆಗೆ ಕಾಯ್ದಿರಿಸದ ಟಿಕೆಟ್ ವಿತರಿಸಲು ಅನುಮತಿ ನೀಡಲಾಗಿದೆ. ಇದು ಕೆಲವು ವಲಯಗಳಿಗೆ ಮತ್ತು ಸ್ಥಳೀಯ ಪ್ಯಾಸೆಂಜರ್ ರೈಲುಗಳಿಗೆ ಮಾತ್ರ ಅನ್ವಯವಾಗಲಿದೆ.ಪ್ರಸ್ತುತ ಇರುವಂತೆಯೇ ಹಬ್ಬದ ವಿಶೇಷ ಸೇರಿದಂತೆ ಮೇಲ್ ಎಕ್ಸ್‌ಪ್ರೆಸ್ ರೈಲುಗಳ ಪೂರ್ಣ ಪ್ರಮಾಣದ ಕಾಯ್ದಿರಿಸುವಿಕೆ ಮುಂದುವರಿಯಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.