ಮನರಂಜನೆ

'ಬೆಳಕು’ ನನ್ನನ್ನು ಕಾಪಾಡಿತು: ರಾಘವೇಂದ್ರ ರಾಜ್ ಕುಮಾರ್

'ಬೆಳಕು’ ನನ್ನನ್ನು ಕಾಪಾಡಿತು: ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು, ಫೆ 18 : ‘ಬೆಳಕು’ ಚಿತ್ರೀಕರಣ ನನ್ನನ್ನು ಕಾಪಾಡಿತು.  ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಕಾರಣ, ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಯಿತು ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಗುರುವಾರ ಡಿಸ್ಚಾರ್ಜ್ ಆಗಿ ಮನೆಗೆ ತೆರಳುವುದಕ್ಕೂ ಮೊದಲು ಈ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶೂಟಿಂಗ್ ನಲ್ಲಿ ಇದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ಬೇರೆಲ್ಲೋ ಇದ್ದಿದ್ರೆ ಕಷ್ಟವಾಗುತ್ತಿತ್ತು.  ಅಂದು ನನಗೆ ಹೃದಯ ಬಡಿತದಲ್ಲಿ ಸ್ವಲ್ಪ ಏರು ಪೇರು ಕಾಣಿಸಿತು ಎಂದಿದ್ದಾರೆರಾಘಣ್ಣ ಡಿಸ್ಚಾರ್ಜ್ ವೇಳೆ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರು ಜೊತೆಯಲ್ಲಿದ್ದರು.ಇದೇ ಆಸ್ಪತ್ರೆಯಲ್ಲಿ ನಾನು 7 ವರ್ಷದ ಹಿಂದೆ ಸ್ಟ್ರೋಕ್ ನಿಂದಾಗಿ ದಾಖಲಾಗಿದ್ದೆ. ಆ್ಯಂಜಿಯೋಗ್ರಾಮ್ ಮಾಡಿದ್ದಾರೆ.  ಒಂದು ವಾರದ ವಿಶ್ರಾಂತಿ ಬಳಿಕ ಕೆಲಸಕ್ಕೆ ವಾಪಸ್ ಆಗುತ್ತೇನೆ' ಎಂದಿದ್ದಾರೆ.

  


ಸುದ್ದಿ ಓದಿ