ಬಳ್ಳಾರಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಕ್ವಿಟ್ ಇಂಡಿಯಾ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಕ್ವಿಟ್ ಇಂಡಿಯಾ ಪ್ರತಿಭಟನೆ

ಲೋಕದರ್ಶನ ವರದಿ 

ಕಂಪ್ಲಿ 07: ರೈತ, ಕೂಲಿ ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವ ಸಲುವಾಗಿ ಆ.9ರಂದು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಪ್ರತಿಭಟನೆ ಏರ​‍್ಾಡಿಸಲಾಗಿದೆ ತಾಲೂಕಿನ ಪ್ರತಿಯೊಬ್ಬ ಶ್ರಮಿಕ ವರ್ಗದವರು ಭಾಗವಹಿಸಬೇಕೆಂದು ಇಲ್ಲಿನ ಸಿಐಟಿಯು ತಾಲೂಕು ಸಂಚಾಲಕ ಬಂಡಿ ಬಸವರಾಜ್ ಹೇಳಿದರು.  


ಪಟ್ಟಣದ ಅತಿಥಿಗೃಹ ಆವರಣದ ಬಳಿ ಶನಿವಾರ ಸಿಐಟಿಯು ಪ್ರಕಟಿಸಿದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಸರ್ಕಾರಗಳು ಕಾರ​‍್ೋರೇಟ್‌ಗಳುವಿದೇಶಿಕಂಪನಿಗಳ ಪರವಾಗಿದ್ದು ರೈತ, ಕಾರ್ಮಿಕ ಸೇರಿ ಸಾಮಾನ್ಯ ಜನ ಹಿತವನ್ನು ಸಂಪೂರ್ಣಕಡೆಗಣಿಸಿವೆ. ಈ ಹಿನ್ನಲೆಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಆ.9ರಂದು ಬೆಳಿಗ್ಗೆ 10ಗಂಟೆಗೆ ಕಂಪ್ಲಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ಈ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ವರ್ಗಗಳ ಶ್ರಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಕರಪತ್ರಗಳನ್ನು ಪಟ್ಟಣದಾದ್ಯಂತ ನಾನಾ ಶ್ರಮಿಕ ವರ್ಗದವರು, ಬೀದಿ ಬದಿ ವ್ಯಾಪಾರಿಗಳಿಗೂ ನೀಡಿದರು. ಕರಪತ್ರ ಬಿಡುಗಡೆಗೊಳಿಸಿ ವಿತರಿಸುವಲ್ಲಿ ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಖುರ್ಷಿದ್ ಬೇಗಂ, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಕಾರ್ಯದರ್ಶಿ ನಾಗರಾಜ, ಆಟೋ ಚಾಲಕರ ಸಂಘದ ತಾಲೂಕು ಕಾರ್ಯದರ್ಶಿ ಕೃಷ್ಣಸ್ವಾಮಿ ಸೇರಿ ಪದಾಧಿಕಾರಿಗಳಾದ ರಾಮಕೃಷ್ಣ, ಈಶಪ್ಪ ಇತರರಿದ್ದರು. 


ಸುದ್ದಿ ಓದಿ