ಹಗರಿಬೊಮ್ಮನಹಳ್ಳಿ

ಗುಣಾತ್ಮಕವಾಗಿ ಸರಕಾರಿ ಶಾಲೆಗಳು ಮೇಲುಗೈ ಸಾಧಿಸಿವೆ: ವೀರೇಶ್ ಮಜ್ಗಿ

ಗುಣಾತ್ಮಕವಾಗಿ ಸರಕಾರಿ ಶಾಲೆಗಳು ಮೇಲುಗೈ ಸಾಧಿಸಿವೆ: ವೀರೇಶ್ ಮಜ್ಗಿ

ಹಗರಿಬೊಮ್ಮಹಳ್ಳಿ 04: ಸರ್ಕಾರಿ ಶಾಲೆಗಳು ಶಿಕ್ಷಣದಲ್ಲಿ ಖಾಸಗಿ ಶಾಲೆಗಳಿಗಿಂತ ಗುಣಾತ್ಮಕವಾಗಿ ಮೇಲುಗೈ ಸಾಧಿಸಿವೆ ಎಂದು ಹಳೆ ಊರಿನ  ಸ.ಮಾ.ಹಿ.ಪ್ರಾ.ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ವೀರೇಶ್ ಮಜ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಪಟ್ಟಣದ ಹಳೆ ಊರಿನ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಎಸ್‌.ಡಿ.ಎಂ.ಸಿ.ಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳು ರೂಪಿತವಾಗಿವೆ ಹಾಗೂ ಸರಕಾರಿ ಶಾಲೆಯಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ ಸಾಧನೆಯ ಛಾಪು ಮೂಡಿಸುತ್ತಿದ್ದಾರೆ ಎಂದು ಸಂತಸ ವ್ಯೆಕ್ತಪಡಿಸಿದರು. ಶಾಲೆಯನ್ನು ಮತ್ತಷ್ಟು ಅಭಿವೃಧ್ಧಿಯತ್ತ ಕೊಂಡೊಯ್ಯಲು ಈ  ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೇ ವಿದ್ಯಾರ್ಥಿಗಳು ಮತ್ತು ಗ್ರಾಮದ ಮುಖಂಡರು ಕೈಜೋಡಿಸುವಂತೆ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಪ್ರತಿವರ್ಷ ಎಸ್‌.ಡಿ.ಎಂ.ಸಿ.ಯಿಂದ ವಿಶೇಷವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು. 

ಪುರಸಭೆ ಸದಸ್ಯರಾದ ಚನ್ನಮ್ಮ ಎಚ್‌.ಎಂ.ವಿಜಯಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿಯೂ ಅಗಾದವಾದ ಪ್ರತಿಭೆ ಅಡಕವಾಗಿರುತ್ತೆ. ಅದನ್ನು ಗುರುತ್ತಿಸುವಲ್ಲಿ ಶಿಕ್ಷಕರ ಪಾತ್ರ ಹಿರಿಮೆಯಾಗಿರುತ್ತೆ ಎಂದರು.  

 ವೇದಿಕೆಯಲ್ಲಿ 493 ವಿದ್ಯಾರ್ಥಿಗಳಿಗೂ ಒಂದೊಂದು ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ 1ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮೆಮೋರಿ ಗೇಮ್ಸ್‌, ರಸಪ್ರಶ್ನೆ, ಭಾಷಣ ಸೇರಿ ವಿವಿಧ ಸ್ಪರ್ಧೆಗಳನ್ನು ಏರಿ​‍್ಡಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.   

ಪುರಸಭೆ ಸದಸ್ಯರಾದ ಮಂಗಳ ರವೀಂದ್ರಗೌಡ, ಎಸ್‌.ಡಿ.ಎಂ.ಸಿ ಉಪಾಧ್ಯಕ್ಷೆ ಟಿ.ಗೀತಾ, ಶಾಲೆಗೆ ದಾನಿಗಳಾದ ಅಂಗಡಿ ರಾಚಪ್ಪ, ನಿವೃತ್ತ ಶಿಕ್ಷಕ ಕೆ.ಎಂ.ಚಿದಾನಂದಯ್ಯ, ಬಾವಿಹಳ್ಳಿ ಅಂಬರೀಶಪ್ಪ, ಕಣವಿಹಳ್ಳಿ ಮಂಜುನಾಥ, ಇಕ್ಕೇರಿ ಕೊಟ್ರೇಶ್, ಶಿಕ್ಷಕರಾದ ರಂಗನಾಥ ಹವಲ್ದಾರ್, ದ್ವಾರಕೇಶ್, ಎಸ್‌.ಡಿ.ಎಂ.ಸಿ ಸದಸ್ಯರು ಮತ್ತು ಶಿಕ್ಷಕರು ಸೇರಿದಂತೆ ಇತರರು ಪಾಲ್ಗೊಂಡಿದ್ದರು. 

ವಿದ್ಯಾರ್ಥಿನಿ ಬಿ.ವಿ.ಮೈತ್ರಿ ಪ್ರಾರ್ಥಿಸಿದರು. ಪ್ರಬಾರಿ ಮುಖ್ಯ ಶಿಕ್ಷಕ ಯು.ಎಸ್‌.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರಾಧಾ ನಿರ್ವಹಿಸಿದರು. 


ಸುದ್ದಿ ಓದಿ