ತಾಳಿಕೋಟಿ

ಮಹಾಂತೇಶ ಮುರಾಳಗೆ ಕಾಯಕ ಸೇವಾ ಪುರಸ್ಕಾರ

ಮಹಾಂತೇಶ ಮುರಾಳಗೆ ಕಾಯಕ ಸೇವಾ ಪುರಸ್ಕಾರ

ತಾಳಿಕೋಟಿ: ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಂಡು ಸಮಾಜ ಸೇವಾ ಕಾರ್ಯಗಳಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿರುವ ಮಹಾಂತೇಶ ಮುರಾಳಗೆ ಕಾಯಕ ಸೇವಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಇತ್ತೀಚೆಗೆ ಸಿಂದಗಿ ಪಟ್ಟಣದ ಜೆ.ಎಚ್. ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಬಿರೋಷನ್ ಪ್ರಕಾಶನ ಬೋರಗಿ, ಮಂದಾರ ಪ್ರತಿಷ್ಠಾನ ಸಿಂದಗಿ ಹಾಗೂ ಜೆ.ಎಚ್. ಪಟೇಲ ಶಿಕ್ಷಣ ಮಹಾವಿದ್ಯಾಲಯ ಸಿಂದಗಿ ಸಹಯೋಗದೊಂದಿಗೆ ಹಮ್ಮಿಕೊಂಡ ಸಾಧಕರಿಗೆ ಗೌರವ ಪುರಸ್ಕಾರ ಹಾಗೂ ಶಿವಸೃತಿ ಕವಿಗೋಷ್ಠಿ ಸಮಾರಂಭದಲ್ಲಿ ಅವರಿಗೆ ಈ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಸಮಾರಂಭದ ಸಾನಿಧ್ಯವನ್ನು ಆಲಮೇಲ ವಿರಕ್ತಮಠದ ಪರಮಪೂಜ್ಯ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಬಿ.ಎಂ. ಹುರಕಡ್ಲಿ, ಬಸವರಾಜ ಸಜ್ಜನ, ಸಿದ್ಧಲಿಂಗ ಚೌಧರಿ, ಹೆಗ್ಗಣದೊಡ್ಡಿ, ಎಂ.ಕೆ. ಆಲಗೂರ ಇದ್ದರು 

ಸುದ್ದಿ ಓದಿ