ಬಳ್ಳಾರಿ

ಪಂಜಾಬ್‌: ಆಮ್ ಆದ್ಮಿ ಪಕ್ಷ ಅಭೂತಪೂರ್ವ ಸಾಧನೆ

ಪಂಜಾಬ್‌: ಆಮ್ ಆದ್ಮಿ ಪಕ್ಷ ಅಭೂತಪೂರ್ವ ಸಾಧನೆ

ಬಳ್ಳಾರಿ 10: ಆಮ್ ಆದ್ಮಿ ಪಕ್ಷವು ಪಂಜಾಬ್ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ, ಬಳ್ಳಾರಿ ಜಿಲ್ಲಾ ಘಟಕದಿಂದ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಪಕ್ಷದ ಜಿಲಾಧ್ಯಕ್ಷರಾದ ವಿ ಬಿ ಮಲ್ಲಪ್ಪ ಮಾತನಾಡಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರ ಜನಪರ ಯೋಜನೆ ಮತ್ತು ಪ್ರಮಾಣಿಕ ಸೇವೆಗೆ ಪಂಜಾಬ್ ಜನ ಮನ್ನಣೆ ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಬಣ್ಣಿಸಿದರು.   

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿ ಬಿ ಮಲ್ಲಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಪದ್ಮಾವತಿ, ಜಿಲ್ಲಾ ಕಾರ್ಯದರ್ಶಿ ಜಕ್ರಿಯ, ಜಂಟಿ ಕಾರ್ಯದರ್ಶಿ ಜಿ ಶೇಖರ್, ಜಾನಕಿರಾಮ್ ಹಾಗೂ ಕಾರ್ಯಕರ್ತ ರಾಜ್ ಮೋಹನ್ ಗಾಂಧಿ, ನಿತಿನ್ ಕುಲಕರ್ಣಿ, ವಿ ನೆಟ್ಟಕಲ್ಲಪ್ಪ, ಕಾವಲಿ ಮಾರೆಣ್ಣ, ಕಟ್ಟೆಬಸಪ್ಪ, ಈ ಜಿ ರೆಡ್ಡಿ, ಜಗನ್ನಾಥ್ ಅಂದ್ರಾಳ್ ಸೇರಿದಂತೆ ಹಲವಾರು ಜನ ಕಾರ್ಯಕರ್ತರಿದ್ದರು. 


ಸುದ್ದಿ ಓದಿ