ಫಿಟ್ ಆಗಿದ್ದ ಪುನೀತ್ ಗೇ ಹೀಗಾಯ್ತಲ್ಲ : ಅರ್ಜುನ್ ಸರ್ಜಾ
ಬೆಂಗಳೂರು, ಅ. 30 ಪುನೀತ್ ತಮ್ಮೊಂದಿಗೆ ಯಾವಾಗಲೂ ಬಾಡಿ ಫಿಟ್ ನೆಸ್ ಬಗ್ಗೆಯೆ ಮಾತನಾಡುತ್ತಿದ್ದರು ಎಂದು ಹಿರಿಯ ನಟ ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಪುನೀತ್ ಗೆ ಯಾವುದೇ ಕೆಟ್ಟ ಚಟ ಇರಲಿಲ್ಲ. ಶಿಸ್ತುಬದ್ಧ ಜೀವನ ಶೈಲಿಯಿತ್ತು ಎಂದರು.
ನಿನ್ನೆ ಸುದ್ದಿ ತಿಳಿದು ಬಹಳ ಆಘಾತವಾಯಿತು. ಫಿಟ್ ಆಗಿದ್ದ ಪುನೀತ್ ಗೇ ಹೀಗಾಯಿತಲ್ಲ ಎಂದು ಅರ್ಜುನ್ ಸರ್ಜಾ ದಿಗ್ಭ್ರಮೆ ಹಾಗೂ ನೋವು ವ್ಯಕ್ತಪಡಿಸಿದ್ದಾರೆ.