ಬೆಳಗಾವಿ

ಕೆಎಲ್‌ಇ ಆಸ್ಪತ್ರೆಯಲ್ಲಿ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಚಾಲನೆ

ಕೆಎಲ್‌ಇ ಆಸ್ಪತ್ರೆಯಲ್ಲಿ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಚಾಲನೆ

ಲೋಕದರ್ಶನ ವರದಿ 

 ಬೆಳಗಾವಿ 28: ರಾಷ್ಟ್ರೀಯ ಪಲ್ಸ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ವತಿಯಿಂದ ದಿ . 28  ರಂದು ನಿಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮಾಜೀ ಮೇಯರ ಹಾಗೂ ನಗರಸೇವಕ ಶ್ರೀ. ಮಂಗೇಶ ಪವಾರ ಹುಟ್ಟಿದ ಮಕ್ಕಳಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕುವದರ ಮೂಲಕ ಪ್ರಾರಂಭಿಸಿದರು. ಮಕ್ಕಳ ಆರೋಗ್ಯ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಪಲ್ಸ ಪೋಲೀಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಕೈಜೋಡಿಸಬೇಕೇಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಚಿಕ್ಕ ವಿಭಾಗದ ತಜ್ಞ ವೈದ್ಯರಾದ ಡಾ. ಸೌಮ್ಯ ವೇರನೆಕರ ಅವರು  ಪೋಲಿಯೋ ನೀರ್ಮೂಲನೆಯಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮದ ಪಾತ್ರ ಹಿರಿದಾದದು. ಈ ಮೂಲಕ ನಮ್ಮ ದೇಶದಲ್ಲಿ ಕಳೆದ 5ವುರ್ಷಗಳೀಂದ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಈ ಕಾರಣ ಈ ಸಲವೂ ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ಹಿಂದೆ ಎಷ್ಟೋ ಸಲ ಲಸಿಕೆ ಹಾಕಿಸಿದ್ದರೂ ಮತ್ತು ಇಂದು 28/06/2026 ರಂದು ತಪ್ಪದೇ ಲಸಿಕೆಯನ್ನು ಹಾಕಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಚಿಕ್ಕ ಮಕ್ಕಳ ವಿಭಾಗದ ತಂಡವನ್ನು ಯು.ಎಸ್‌.ಎಂ ಕೆ.ಎಲ್‌.ಇ ನಿರ್ದೇಶಕರಾದ ಡಾ. ಹೆ.ಬಿ ರಾಜಶೇಖರ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ.ನವೀನ ಎನ್ ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಅವರು ಅಭಿನಂದಿಸಿದ್ದಾರೆ. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ   ತಜ್ಞ ವೈದ್ಯರಾದ ಡಾ. ಸಂತೋಷ ಕರಮಸಿ, ಡಾ. ಸೌಮ್ಯ ವೆರ್ನೇಕರ ಮತ್ತು ಸ್ನೇಹಲ್ ವೇರನೆಕರ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರವನ್ನು ಡಾ. ಸ್ನೇಹಲ್ ವೇರನೆಕರ ನಿರೂಪಿಸಿದರು ಮತ್ತು ಡಾ.ಸಂತೋಷ ಕರಮಸಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ