ಇಂಡಿ

ಪಲ್ಸ್‌ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶ ಹೊಂದಿದೆ: ನೆಗಳೂರ

ಪಲ್ಸ್‌ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶ ಹೊಂದಿದೆ: ನೆಗಳೂರ

ಇಂಡಿ12:  ಪಲ್ಸ್‌ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯವರ್ಧಕಗಳನ್ನು ಹೊಂದಿದೆ. ಬೆಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಿ ಹೆಸರು, ಉದ್ದು ಮತ್ತು ತೊಗರಿ ಬೆಳೆಗಳ ಇಳುವರಿ ಹೆಚ್ಚಿಸಿ ಕಾಳುಗಳ ಗಾತ್ರವನ್ನು ಉತ್ತಮಗೊಳಿಸುತ್ತದೆ ಎಂದು ಕೆವಿಕೆ ಮುಖ್ಯಸ್ಥ ಡಾ. ಆರ್‌.ಬಿ. ನೆಗಳೂರ ಹೇಳಿದರು. 

ಅವರು ಪಟ್ಟಣದ ರೈಲು ನಿಲ್ದಾಣ ರಸ್ತೆಯ ಕೆ.ವಿ.ಕೆ. ಕೇಂದ್ರದಲ್ಲಿ ರಾಯಚೂರಿನಿಂದ ಸಂಶೋಧನೆಗೊಂಡು, ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯಲ್ಲಿ ತಯಾರಿಸಿ ರೈತರಿಗೆ ಅನಕೂಲವಾಗಲೆಂದು ಮಾರಾಟ ಮಾಡುತ್ತಿದ್ದರು. ಇದನ್ನು ಮನಗಂಡು ಇಂಡಿ ಮತ್ತು ಸಿಂದಗಿ ಭಾಗದ ರೈತರಿಗೆ ಅನಕೂಲವಾಗಲೆಂದು ಕಲಬುರಗಿಯಿಂದ ಕೃಷಿ ವಿಜ್ಞಾನ ಕೇಂದ್ರ, ಇಂಡಿಗೆ ತರಿಸಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು. 

ಪಲ್ಸ್‌ ಮ್ಯಾಜಿಕನಲ್ಲಿ ಸಾರಜನಕ ಶೇ.10, ರಂಜಕ ಶೇ.40 ಲಘು ಪೋಷಕಾಂಶಗಳು ಶೇ.3 ಸಸ್ಯ ಪ್ರಚೋದಕಗಳು ಸೇರಿ 20 ಪಿ.ಪಿ.ಎಂ. ನಷ್ಟು ಹೊಂದಿದೆ. 

ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ತೊಗರಿ ಮತ್ತು ಇತರೆ ದ್ವಿದಳ ಧಾನ್ಯ ಬೆಳೆಗಳು ದಷ್ಟ-ಪುಷ್ಟವಾಗಿ ಹೂ ಮತ್ತು ಕಾಯಿಗಳ ಉದುರುವಿಕೆಯನ್ನು ತಡೆಗಟ್ಟುತ್ತದೆ. ಪಲ್ಸ್‌ ಮ್ಯಾಜಿಕ್ ಸಿಂಪರಣೆಯಿಂದ ಕಾಯಿ ಕಟ್ಟುವಿಕೆ ಹೆಚ್ಚಾಗುತ್ತದೆ ಎಂದರು. 

ಪ್ರತಿ ಗಿಡದಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಾಗಿ ಮಾಗುವಿಕೆ ಸಮನಾಗಿರುತ್ತದೆ ಇದರ ಸಿಂಪರಣೆಯಿಂದ ಪ್ರತಿ ಕಾಳುಗಳ ದಪ್ಪವಾಗಿ ಕಾಳಿನ ತೂಕದಲ್ಲಿ ಗಣನೀಯವಾಗಿ ತೂಕ ಹೆಚ್ಚುತ್ತದೆ. ದ್ವಿದಳ ಧಾನ್ಯ ಬೆಳೆಗಳಲ್ಲಿ ಶೇ. 17 ರಿಂದ  20 ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು. 

ರೈತರಿಗೆ ಅತಿ ಉಪಯುಕ್ತವಾದ ಪಲ್ಸ್‌ ಮ್ಯಾಜಿಕ್‌ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ  

ಡಾ. ಆರ್‌. ಬಿ. ನೆಗಳೂರ, ಮುಖ್ಯಸ್ಥರು ದೂ,9448495320, ಡಾ. ಸವಿತಾ ಬಿ., ವಿಜ್ಞಾನಿ. ದೂ. 8650944765, ಡಾ. ಸಂತೋಷ ಶಿಂದೆ, ವಿಜ್ಞಾನಿ.   ದೂ. 8791107090 ಮತ್ತು ಡಾ. ಎಸ್‌.ಎಸ್‌. ಅಂಜುಮ್, ವಿಜ್ಞಾನಿ.  ದೂ.  9739321487 ಇವರಿಗೆ ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.  

ಸುದ್ದಿ ಓದಿ