ಬೇಜವಾಬ್ದಾರಿ ಅಧಿಕಾರಿಗಳಿಗೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರ ಸತ್ಯಾಗ್ರಹ
ಮುದ್ದೇಬಿಹಾಳ:ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಅತ್ಯವಶ್ಯಕವಿರುವ ಉತಾರ(ಪಹಣಿ ಪತ್ರ) ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡದೇ ತೊಂದರೆ ಮಾಡುತ್ತಿದ್ದಾರೆ ಕಾರಣ ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಬೆರೆಡೆ ವರ್ಗಾಯಿಸಬೇಕು ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ವಾರ್ಡ ನಂ 16ರ ಬಾರಪೇಟ ಗಲ್ಲಿ ಯುವ ಮುಖಂಡ ಮುನ್ನಾ ಮಕಾನದಾರ ನೇತೃತ್ವದಲ್ಲಿ ಸಾರ್ವಜನಿಕರು ಪುರಸಭೆ ಎದುರು ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಮುಂದುವರೆಯಿತು.
ಈ ವೇಳೆ ಯುವ ಮುಖಂಡ ಮುನ್ನಾ ಮಕಾನದಾರ ಅವರು ಮಾತನಾಡಿ ಕಳೆದ ಎರಡು ದಿನಗಳಿಂದ ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಇಲ್ಲಿಯತನಕ ಯಾವ ಸಂಬಂಧ ಪಟ್ಟ ಮೇಲಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ ಇದರಿಂದ ಅಧಿಕಾರಿಗಳು ಮುಖ್ಯಾಧಿಕಾರಿಗಳೊಂದಿಗೆ ಶಾಮಿಲಾಗಿ ಉದ್ದೇಶಪೂರ್ವಕವಾಗಿ ಈ ರೀತಿ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ಇದು ಹೀಗೇ ಮುಂದುವರೆದರೇ ದಿನದಿನಕ್ಕದೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರೋಂದಿಗೆ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಕಾರಣ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ನಮಗೆ ನ್ಯಾಯ ಸಿಗುವವರೆಗೂ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ ಎಂದರು.
ಈ ವೇಳೆ ತಾಲೂಕಿನ ಬಂಗಾರಗುಂಡ ರೈತ ರಾಜೇಂದ್ರ ನಾಗಪ್ಪ ಗುಡಗುಂಟಿ ಅವರು ಮಾತನಾಡಿದ ಕಳೆದ ಒಂದು ವರ್ಷದಿಂದ ನನಗೆ ಉತಾರ ಕೊಡಬೇಕೇಂದು ಪುರಸಭೆ ಕಚೇರಿಗೆ ಅಲೇಯುತ್ತಲೇ ಇದ್ದೇನೆ ಆದರೇ ಇಲ್ಲಿಯವರೆಗೂ ನನಗೆ ಉತಾರ ಕೊಡುತ್ತಿಲ್ಲ ಇದರಿಂದಾಗಿ ನನಗೆ ಬ್ಯಾಂಕಿನಲ್ಲಿ ವ್ಯವಹರಿಸಲು ತೀವೃ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಬಂದೇನವಾಜ ಮ್ಯಾಗೇರಿ, ಎಂ ಕೆ ನಾಲಬಂದ, ಪರೇ್ವಜ ಫಠಾಣ, ಅಪ್ತಾಬ ಮನಿಯಾರ, ಅಯಾಜ ಶಿರಗುಂಪಿ, ಮೋಶಿನ ಘಾಟಿ, ಭೀಮಣ್ಣ ಅಂಬಿಗೇರ, ಸದ್ದಾಂ ನದಾಫ, ತೌಕೀರ ಮಕಾನದಾರ, ಕೋಯಲ್ ತುರಕನಗೋರಿ, ಇಮ್ರಾನ್ ಕೂಡಗಿ ಸೇರಿದಂತೆ ಹಲವರು ಇದ್ದರು.
19ಎಂಬಿಎಲ್1: ಮುದ್ದೇಬಿಹಾಳ ಪಟ್ಟಣದ ವಾರ್ಡ ನಂ 16ರ ಬಾರಪೇಟ ಗಲ್ಲಿ ಯುವ ಮುಖಂಡ ಮುನ್ನಾ ಮಕಾನದಾರ ನೇತೃತ್ವದಲ್ಲಿ ಸಾರ್ವಜನಿಕರು ಪುರಸಭೆ ಎದುರು ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಮುಂದುವರೆದಿದೆ.