ಮುದ್ದೆಬಿಹಾಲ್

ಅಂಬೇಡ್ಕರ್ ಸಮುದಾಯ ಭವನ ಸ್ವಚ್ಚತೆಗೆ ಸಾರ್ವಜನಿಕ ಆಗ್ರಹ

ಅಂಬೇಡ್ಕರ್ ಸಮುದಾಯ ಭವನ ಸ್ವಚ್ಚತೆಗೆ  ಸಾರ್ವಜನಿಕ ಆಗ್ರಹ

ಮುದ್ದೇಬಿಹಾಳ 25:- ಪಟ್ಟಣದ ತಹಶೀಲ್ದಾರ ಕಚೇರಿಯ ಪಕ್ಕದಲ್ಲಿರುವ ಅಂಬೇಡ್ಕರ್ ಸಮುದಾಯ ಭವನ ನಿರ್ವಹಣೆಯ ಕೊರತೆಯಿಂದ ಕಸಕಡ್ಡಿಗಳಿಂದ ತುಂಬಿದ್ದು, ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಅಂಬೇಡ್ಕರ ಸೇನೆಯ ತಾಲೂಕಾ ಅಧ್ಯಕ್ಷ ಪ್ರಕಾಶ ಸರೂರ ಮಾತನಾಡಿ ಪಟ್ಟಣದಲ್ಲಿ ಅಂಬೇಡ್ಕರ ಸಮುದಾಯ ಭವನ ಸಾರ್ವಜನಿಕರಿಗೆ, ಮದುವೆ ಸಮಾರಂಭ, ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ಬಾಡಿಗೆ ಪಡೆದ ಫಲಾನುಭವಿಗಳು ತಮ್ಮ ಕಾರ್ಯಕ್ರಮಗಳನ್ನು ಮುಗಿದ ನಂತರ ಸಮುಧಾಯ ಭವನ, ಹಾಗೂ ಅದರ ಮುಂದಿನ ಆವರಣದಲ್ಲಿ ಕಸ, ಕಡ್ಡಿಯಯನ್ನು ಹಾಕಿದ ಗಲೀಜು ಅಲ್ಲೇ ಬಿಟ್ಟು ಹೋರಟು ಹೋಗುತ್ತಾರೆಂದು ಆರೋಪಿಸಿದ ಅವರು  ಈ ಸಮುಧಾಯ ಭವನದ ಹೋಣೆಯನ್ನು ಹೋತ್ತಿರುವ ಪುರಸಭೆ ಅಧಿಕಾರಿಗಳು ಆದಾಯವನ್ನು ಪಡೆದುಕೊಂಡರೂ ಇದರ ಸ್ವಚ್ಚತೆಯನ್ನು ಕಾಪಾಡದೇ ನಿರ್ಲಕ್ಷ್ಯ ವಹಿಸಿದ್ದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಆದರಿಂದ ಕೂಡಲೇ ಪುರಸಭೆಯ ಸಿಬ್ಬದ್ದಿಗಳು ನಿರ್ವಹಣೆಯ ಸ್ವಚ್ಚತೆಯನ್ನು ಮಾಡದ್ದಿದರೆ ಪುರಸಭೆಯ ಮುಂದೆ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ. 

ಪಟ್ಟಣದಲ್ಲಿ ಇರುವ ಅಂಬೇಡ್ಕರ್ ಭವನದ ಮುಂದೆ ಗಲೀಜು ತುಂಬಿದೆ, ಸ್ವಚ್ಚತೆಯನ್ನು ಮಾಡಬೇಕಿದ್ದ ಪುರಸಭೆಯ ಅಧಿಕಾರಿಗಳು ಆದಾಯ ಪಡೆಯುತ್ತಾರೆ ಹೊರತು ಸರಿಯಾಗಿ ನಿರ್ವಹಣೆಯನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ಪ್ರಕಾಶ ಸರೂರ ಅಂಬೇಡ್ಕರ ಸೇನೆಯ ತಾಲೂಕಾ ಅಧ್ಯಕ್ಷರು ಆರೋಪಿಸಿದರು. 


ಸುದ್ದಿ ಓದಿ