ಬಳ್ಳಾರಿ

ಮಹಿಳೆ, ಮಕ್ಕಳ ದೌರ್ಜನ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ: ನಂದಿನಿ

ಮಹಿಳೆ, ಮಕ್ಕಳ ದೌರ್ಜನ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ: ನಂದಿನಿ

ಬಳ್ಳಾರಿ 12: ಜಿಲ್ಲಾಡಳಿತ,ಜಿಪಂ,ಮಹಿಳೆಯರ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವರ್ಲ್ಡ್‌ ವಿಷನ್ ಸಂಸ್ಥೆಯ ವತಿಯಿಂದ ಮಹಿಳೆಯರ ಮತ್ತು ಮಕ್ಕಳ ಕುರಿತು ಜಾಗೃತಿ ಮೂಡಿಸುವ ಜಾಗೃತಿ ಜಾಗೃತಿ ರಥಕ್ಕೆ ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು. 

ಜಾಗೃತಿ ರಥಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿ ಯಾವುದೇ ಒಂದು ಕಾರ್ಯ ಸರ್ವರಿಗೂ ತಲುಪಬೇಕಾದರೆ ಸಮುದಾಯದ ಜನ, ಜನಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಿಬೇಕು. ಈ ನಿಟ್ಟಿನಲಿ ಎಲ್ಲ ಅಧಿಕಾರಿ ವರ್ಗದವರು ಕಾರ್ಯಪ್ರವೃತ್ತರಾಗಬೇಕು. ಜಾಗೃತಿ ರಥವು ತಾಲೂಕಿನ ಆಯ್ದ 35  ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ತಾಲೂಕಿನಲ್ಲಿ ಜಾಗೃತಿ ರಥವು ಸಂಚರಿಸಲಿದೆ ಎಂದರು. 

ಮಹಿಳೆಯರು,ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಲ್ಯ ವಿವಾಹ ತಡೆ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ಹಿಂದೆ ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಕಾರ್ಯಕ್ರಮವು ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ತಡೆಯಲು ಸಹಕಾರಿಯಾಗಿತ್ತು. ಪ್ರಸ್ತುತ ಕೋವಿಡ್ ಕಾರಣದಿಂದಾಗಿ ಮತ್ತೆ ಈಗ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.  

ಇದೇ ಸಮಯದಲ್ಲಿ ವರ್ಲ್ಡ್‌ವಿಷನ್ ವತಿಯಿಂದ ರೂ.20 ಲಕ್ಷ ವೆಚ್ಚದ 10 ಕಾನ್ಸಂಟ್ರೇಟರ್ ಮತ್ತು ಪಿಪಿಇ ಕಿಟ್‌ಗಳನ್ನು ಜಿಲ್ಲಾಸ್ಪತ್ರೆಗೆ ನೀಡಿದ್ದು, ಸಾಂಕೇತಿಕವಾಗಿ 1 ಕಾನ್ಸಂಟ್ರೇಟರ್ ಅನ್ನು ಜಿಪಂ ಸಿಇಒ ಕೆ.ಆರ್‌.ನಂದಿನಿ ಅವರು ವರ್ಲ್ಡ್‌ ವಿಷನ್ ಸಂಸ್ಥೆಯ ವ್ಯವಸ್ಥಾಪಕಿ ಪ್ರೇಮಲತಾ ಅವರಿಂದ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್‌.ನಾಗರಾಜ, ಮಕ್ಕಳ ರಕ್ಷಣಾಧಿಕಾರಿ ಚಾಂದ್‌ಪಾಷಾ, ವರ್ಲ್ಡ್‌ ವಿಷನ್ ಸಂಸ್ಥೆಯ ವ್ಯವಸ್ಥಾಪಕಿ ಪ್ರೇಮಲತಾ ಮತ್ತು ಇತರರು ಇದ್ದರು. 


ಸುದ್ದಿ ಓದಿ