ಬಾಲ್ಯವಿವಾಹ ತಡೆಗೆ ಜನ ಜಾಗೃತಿ ಅಗತ್ಯ: ಜ್ಯೋತಿ ಪಾಟೀಲ
ಲೋಕದರ್ಶನ ವರದಿ
ಮೂಡಲಗಿ 11: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಬಾಲ್ಯವಿವಾಹ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಕ್ಕಳ ಹಕ್ಕಗಳನ್ನು ರಕ್ಷಿಸಬೇಕಾದ ಹೊಣೆ ಎಲ್ಲರ ಮೇಲಿದೆ ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.
ಶುಕ್ರವಾರದಂದು ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾ ಕಾನುನೂ ಸೇವಾ ಸಮಿತಿ ಗೋಕಾಕ, ತಾಲೂಕಾಡಳಿ ಮೂಡಲಗಿ, ನ್ಯಾಯವಾಧಿಗಳ ಸಂಘ ಮೂಡಲಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಅರಭಾವಿ-ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾನುನೂ ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯವಿವಾಹ ಹೆಚ್ಚಾಗಲು ಹೆಣ್ಣು ಮಕ್ಕಳ ಬಗ್ಗೆ ಇರುವ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿದ್ದು ಹೆಣ್ಣು ಮಕ್ಕಳು ಕನಿಷ್ಠ ಪದವಿ ಶಿಕ್ಷಣ ಮುಗಿದ ನಂತರ ಮದುವೆ ವಿಚಾರಕ್ಕೆ ಹೊಗಬೇಕು. ಆಗ ಅವರ ಆಯ್ಕೆ ಹಾಗೂ ಪರಿಪಕ್ವತೆ ಹೊದಿರುತ್ತಾರೆ. ಇಲ್ಲದೇ ಬಾಲ್ಯವಿವಾಹ ಮಾಡುವ ಪಾಲಕರು, ಕಲ್ಯಾಣ ಮಂಟಪದ ಮಾಲೀಕರು ಹಾಗೂ ಪುರೋಹಿತರ ವಿರುದ್ಧವೂ ಪ್ರಕರಣ ದಾಖಲಿಸಿ ಶಿಕ್ಷ ವಿಧಿಸಲಾಗುವುದು ಎಂದರು.
ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರ ಎನೆಲ್ಲ ಕಾನುನೂ ಜಾರಿಗೊಳಿಸಿದ್ದರೂ ಮತ್ತೆ ಮತ್ತೆ ಸಂಭವಿಸುತ್ತಿವೆ. ಇದರ ನಿಯಂತ್ರಣಕ್ಕೆ ಇಡೀ ಸಮುದಾಯವೇ ಜಾಗೇತವಾಗಬೇಗಿದೆ. ಮೂಡಲಗಿ ಪಟ್ಟಣದಲ್ಲಿ ಅತೀ ಹೆಚ್ಚು ಭ್ರೂಣ ಹತ್ಯೆ ಆಗುತ್ತಿದ್ದು, ಕೆಲವೊಂದು ಓಷಧಿ ಅಂಗಡಿಗಳಲ್ಲಿ ಭ್ರೂಣ ಹತ್ಯೆ ಮಾಡುವಂತ ಮಾತ್ರೆಗಳು ಪಟ್ಟಣದಲ್ಲಿ ಸಿಗುತ್ತಿವೆ. ಅದು ಅಲ್ಲದೇ ಡ್ರಗ್ಸ್ ಕೂಡಾ ಓಷಧಿ ಅಂಗಡಿಗಳಿಂದ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಇನ್ನೂ ಮುಂದೆ ಮೂಡಲಗಿ ತಾಲೂಕನ್ನು ಆರೋಗ್ಯವಂತ ತಾಲೂಕನ್ನಾಗಿ ಮಾಡೋಣಾ ಎಂದರು.
ಪಾಲಕರು ಮನೆಯಲ್ಲಿ ಮಕ್ಕಳೊಂದಿಗೆ ಗೆಳಯರಂತೆ ವರ್ತಿಸಿ ಅವರಿಗೆ ತಿಳಿ ಹೇಳಬೇಕು. ಯಾವು ಕಾರಣಕ್ಕೂ ಬೇದರಿಸುವು ಮಾಡದೇ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ಕಾನುನೂನ ಅರಿವು ಮೂಡಿಸುವಂತ ಕಾಯಕವನ್ನು ಪಾಲಕರು ಮಾಡಿದೇ ಮಕ್ಕಳ ಮುಂದೆ ಯಾವುದೇ ಅಪರಾಧ ಮಾಡದೇ ಉತ್ತಮ ನಾಗರೀಕರಾಗುತ್ತಾರೆ ಎಂದರು.
ನ್ಯಾಯವಾಧಿಗಳಾದ ಎಲ್ ವಾಯ್ ಅಡಿಹುಡಿ ಹಾಗೂ ಜೆ ಪಿ ಕುಡತೆ ಮಾತನಾಡಿ, ಮಹಿಳೆ ಹಾಗೂ ಮಕ್ಕಳಿಗೆ ಇರುವ ಹಕ್ಕುಗಳು ಹಾಗೂ ಕಾನುನೂಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ ವೈ ಹೆಬ್ಬಾಳ, ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ, ಸಿಡಿಪಿಒ ಯಲ್ಲಪ್ಪ ಗದಾಡಿ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.