ಮುದ್ದೆಬಿಹಾಲ್

ಇಸ್ಲಾಂ ಧರ್ಮದ ವಿರುದ್ಧ ಪ್ರಚೋದನಾಕಾರಿ: ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮನವಿ

ಇಸ್ಲಾಂ ಧರ್ಮದ ವಿರುದ್ಧ ಪ್ರಚೋದನಾಕಾರಿ: ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮನವಿ

ಮುದ್ದೇಬಿಹಾಳ 04:  ಪ್ರವಾದಿ ಮಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ ವಿರುದ್ಧ ಪಟ್ಟಣದ  ಮುಸ್ಲಿಂ ಸಮಾಜ ಬಾಂಧವರು ಬುಧವಾರ ಕಿಲ್ಲಾಗಲ್ಲಿಯಿಂದ ಮುಖ್ಯ ಬಜಾರ ಮಾರ್ಗವಾಗಿ ಸಾವಿರಾರು ಜನ  ಪಾದಯಾತ್ರೆ ಮೂಲಕ ಹುಡ್ಕೋ ಬಡಾವಣೆಯಲ್ಲಿರುವ  ಮಿನಿ ವಿಧಾನ ಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಿ ಸ್ವಾಮಿಜಿಯನ್ನು ಬಂಧಿಸಿ ಉಗ್ರ ಕಠೀಣ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ತಹಶಿಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 

ಬಸವೇಶ್ವರ ವೃತ್ತದಲ್ಲಿ ಮಿನಿ ವಿಧಾನ ಸೌಧ ಆವರಣದಲ್ಲಿ ಬುಧವಾರ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ  ಮೌಲಾನಾ ಅಲ್ಲಾಭಕ್ಷ ಖಾಜಿ, ಹುಸೇನ ಉಮ್ರೀ, ಡಾ, ಎಂ ಎಂ ಮುಲ್ಲಾ, ಪಿಂಟು ಸಾಲಿಮನಿ, ಎಚ್ ಆರ್ ಬಾಗವಾನ, ಕೆ ಎಂ ರಿಸಾಲ್ದಾರ ಅವರು ಮಾತನಾಡಿ ಶತಶತಮಾನಗಳಿಂದಲೂ ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಅವರವರ ಧರ್ಮ ಆಚರಣೆ ಮಾಡಿಕೊಂಡು ಸಹೋದರತೆಯಿಂದ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದೇವೆ, ಆದರೇ ಇಂತಹ ಸಮಾಜ ಘಾತುಕ ಸ್ವಾಮಿಜಿಗಳಿಂದ ಮುಸ್ಲಿಂ ಸಮೂದಾಯಕ್ಕೆ ಮಾತ್ರವಲ್ಲದೇ ಇತರೇ ಎಲ್ಲ ಸಮೂದಾಯದ ಜನರಿಗೆ ಕೋಮು ಸೌಹಾರ್ಧತೆ ಗೆ ದಕ್ಕೆಯನ್ನುಂಟು ಮಾಡಿದೆ.   ‘ಪ್ರವಾದಿ ಮೇಲಿನ ನಮ್ಮ ಪ್ರೀತಿ ಅತ್ಯುನ್ನತವಾದದ್ದು, ಮುಸಲ್ಮಾನರು ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ. ಆದರೆ ಪ್ರವಾದಿಯವರ ಅಗೌರವ ಸಹಿಸಲು ಸಾಧ್ಯವಿಲ್ಲ. ರಾಮಗಿರಿ ಮಹಾರಾಜರ ಹೇಳಿಕೆಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ’ . 

ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣ ತೆತ್ತವರು ಅತಿ ಹೆಚ್ಚು ಮುಸ್ಲಿಂ ಸಮಾಜದ ನಾಯಕರು ಎಂಬುದನ್ನು ಇತಿಹಾಸ ಸಾರಿ ಹೇಳುತ್ತದೆ. ಇತಿಹಾಸವೇ ಗೊತ್ತಿಲ್ಲದೇ ಮುಸ್ಲಿಂ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿ  ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಕೋಮು ಗಲಬೆಗಳನ್ನು ಸೃಷ್ಠಿಸುವ ದೇಶದ ಜನರ ನೆಮ್ಮದಿ ಹಾಳು ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುವ  ಹುನ್ನಾರ ಇದರ ಪ್ರಮುಖ ಉದ್ದೇಶವಾಗಿದೆ.  ಈ ರೀತಿ‘ಸುಳ್ಳು ಮಾಹಿತಿ ಹರಡುವ ಮತ್ತು ಉದ್ದೇಶ ಪೂರ್ವಕವಾಗಿ ಇಸ್ಲಾಂ ಧರ್ಮದ ಬಗ್ಗೆ ಜನರನ್ನು ದಾರಿ ತಪ್ಪಿಸುವ ವೆಬ್‌ಸೈಟ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಹ ವೆಬ್‌ಸೈಟ್‌ಗಳಿಗೆ ಕಡಿವಾಣ ಹಾಕಬೇಕು, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಗ್ರೇಡ್ 2 ತಹಶೀಲ್ದಾರ್ ಸಂಗಮನಾಥ ಎಚ್ ಮೆಳ್ಳಿಗೇರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಮೌಲಾನಾ ಅಲ್ಲಾಬಕ್ಷ ಮುಪ್ತಿ ಮಹ್ಮದಿರ್ಫಾನ ಪಠನಿ.ಮೌಲಾನಾ ಅಲ್ಲಾಬಕ್ಷ ಖಾಜಿ.ನ್ಯಾಯವಾದಿ ಎನ್‌.ಬಿ ಮುದ್ನಾಳ, ಡಿ.ಎಮ ಚೌಧರಿ ಮೌಲಾನಾ ಹುಸೇನ ಉಮ್ರಿ ಮೌಲಾನಾ ಆ​‍್ತಾಬ.ಇರ​‍್ಾನ ಕೂಡಗಿ.ಮಲೀಕ ನದಾಫ .ಅಜೀಮ ಖಾನ ಎಸ್ ಡಿ ಪಿ ಐ.ಅಧ್ಯಕ್ಷ ಸಮೀರ ಹುಣಚಗಿ, ಸುಹೇಲ ಚೌಧರಿ.ಐ.ಎಲ .ಮಮದಾಪೂರ. ಸಯ್ಯದ ಹಳ್ಳೂರ .ರಜಾಕ ಮುದ್ದೇಬಿಹಾಳ ಮುನ್ನಾ ಹಡಗಲಿ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರೀಯಾಜಹಮ್ಮದ ಢವಳಗಿ, ಸಮೀರ ದ್ರಾಕ್ಷಿ, ಮುಖಂಡರಾದ ಎಂ.ಆರ್ ಅತ್ತಾರ, ಡಿ.ಕೆ ಚೌಧರಿ, ಹುಸೇನ ಮುಲ್ಲಾ, ಜಬ್ಬಾರ ಗೊಲಂದಾಜ, ಅಲ್ಲಾಭಕ್ಷ ನಾಯ್ಕೋಡಿ, ಅಲ್ಲಾಭಕ್ಷ ಮುದ್ನಾಳ, ಹಬೀಬ ನಾಲತವಾಡ, ಮಲೀಕ ನದಾಫ್, ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ