ಗ್ರಾಮೀಣಗಳಿಂದ ನಗರದವರೆಗೆ ಮೂಲಭೂತ ಸೌಕರ್ಯ ಒದಗಿಸುವುದು ನನ್ನ ಮೊದಲ ಆದ್ಯತೆ: ಡಾ. ಬೆಲ್ದಾಳೆ
ಬೀದರ್ 28 : ಬೇಮಳಖೇಡಾ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಬಸವೇಶ್ವರರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿಯಾಗಿದೆ. ಗ್ರಾಮೀಣ ಪ್ರದೇಶಗಳಿಂದ ನಗರಗಳವರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡಾ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಬಸವೇಶ್ವರರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಸಮುದಾಯ ಭವನವು ಗ್ರಾಮಸ್ಥರ ಸಭೆಗಳು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಮದ ಅಭಿವೃದ್ಧಿಗೆ ಇಂತಹ ಮೂಲಸೌಕರ್ಯಗಳು ಅತ್ಯಂತ ಅಗತ್ಯವಾಗಿದ್ದು, ಜನರ ಅಗತ್ಯಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿ ನನ್ನ ಧ್ಯೇಯವಾಗಿದೆ, ಮಹಿಳೆಯರ ಸಬಲೀಕರಣ, ರೈತರ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರ ಸಹಕಾರವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಜನರ ಅಗತ್ಯಗಳನ್ನು ಅರಿತು, ಪಾರದರ್ಶಕ ಹಾಗೂ ಜನಪರ ಆಡಳಿತದ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪ ನಮ್ಮದು.ಬನ್ನಿ, ನಾವು ಎಲ್ಲರೂ ಒಟ್ಟಾಗಿ ಅಭಿವೃದ್ಧಿಯ ದಾರಿಯಲ್ಲಿ ಹೆಜ್ಜೆ ಇಟ್ಟು, ಸಮೃದ್ಧ ಹಾಗೂ ಪ್ರಗತೀಶೀಲ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಭು ಮೆಂಘಾ, ರಾಜಕುಮಾರ ಮಾಳಗೆ, ಮಾಣಿಕಪ್ಪ ಖಾಶೆಂಪುರ, ಬಸವರಾಜ ಚಟನಳ್ಳಿ, ಮಂಜುನಾಥ ಸುಣಗಾರ, ಪ್ರಭು ಸಾವಳಗಿ, ಬಸವರಾಜ ಸಿಂಧೋಲ, ವಿರೇಂದ್ರ ಹಜ್ಜರಗಿ, ಭರತ ಪಾಟೀಲ, ಸಿದ್ದು ಮುದ್ದಾ, ಬಸವಂತರಾವ ಪಾಟೀಲ, ನಾಗರಾಜ ಗುಮ್ಮದ, ಸಂತೋಷ ರೆಡ್ಡಿ, ಶಂಕರ ಪಾಟೀಲ, ಹುಲೆಪ್ಪ ಮುದ್ದಾ, ಗಂಗಾಧರ ಪಾಟೀಲ, ಶಿವಕುಮಾರ ದುರ್ಘದ, ಅನೀಲ ಚಟನಳ್ಳಿ, ರಾಘು ಪಟ್ನೆ, ರಾಚು ಗಾದಗಿ, ರಾಜಕುಮಾರ ಕಟ್ಟಿಮನಿ,
ವಿನೋದ ಪಾಟೀಲ, ಹಣಮಂತ ಹಾಲದೊಡ್ಡಿ, ಶ್ರೀನಿವಾಸ ಹುಗಾರ, ಶ್ರೀನಿವಾಸ, ನರೇಶ, ಗಂಗಾಧರ ಪಾಂಚಾಳ, ಬಸವರಾಜ ಯದಲಾಪುರ, ಅನೀಲ ಭಂಗೂರ, ವಿನೋದ ಗುಮ್ಮದ, ರಾಜಕುಮಾರ, ವೈಜಿನಾಥ, ಸುನೀಲ, ಮಂಜುನಾಥ, ಬಸವರಾಜ, ಸಂದೀಪ ರೊಟ್ಟಿ, ವಿನೋದ ದುರ್ಗೆ ಮತ್ತಿತರರು ಉಪಸ್ಥಿತರಿದ್ದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ್ ಸಿದ್ದಾ.