ಶಿಗ್ಗಾವ್

ಗರ್ಭಿಣಿ, ಮಗುವಿಗೆ ಪೂರಕ ಆಹಾರ ನೀಡಿ

ಗರ್ಭಿಣಿ, ಮಗುವಿಗೆ ಪೂರಕ ಆಹಾರ ನೀಡಿ
ಪಟ್ಟಣದ ಜಯನಗರದ ವಡ್ಡರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಪೋಷಣಾ ದಿನವನ್ನು ಆಚರಿಸಲಾಯಿತು.

ಶಿಗ್ಗಾವಿ 6: ಗರ್ಭಿಣಿಯರು ಹಾಗೂ ಮಗುವಿಗೆ ಪೂರಕ ಆಹಾರ ಒದಗಿಸುವಲ್ಲಿ ಗರ್ಭಿಣಿಯ ಸಂಬಂಧಿಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ಟಿ.ಎನ್. ಜವಳಗಟ್ಟಿ ಹೇಳಿದರು.

ಪಟ್ಟಣದ ಜಯನಗರದ ವಡ್ಡರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಪೋಷಣಾ ದಿನದ ಅಂಗವಾಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗರ್ಭಿಣಿಯರ ಹೆರಿಗೆ ಸಿದ್ಧತೆ, ಸ್ತನಪಾನ ಪ್ರಾರಂಭಿಸಲು ಸಂಬಂಧಿಸಿದ ಆಚರಣೆಗಳು, ಪೂರಕ ಆಹಾರ, ವಿಶ್ರಾಂತಿ ಹಾಗೂ ಋತುಮಾನಗಳಿಗನುಗುಣವಾಗಿ ಆಹಾರ ಬಳಕೆ ಬಗ್ಗೆ ಗರ್ಭಿಣಿಯ ಸಂಬಂಧಿಕರಿಕೆ ತಿಳಿಹೇಳಿದರು.

ಪುರಸಭೆ ಸದಸ್ಯೆ ಶೇಖವ್ವ ವಡ್ಡರ, ಮಂಜುನಾಥ ಬಂಡಿವಡ್ಡರ, ಈರಪ್ಪ ವಡ್ಡರ, ವೆಂಕಟೇಶ ಭಜಂತ್ರಿ, ರಮೇಶ ಓಲೇಕಾರ, ಸಣ್ಣ ಹನಮಂತಪ್ಪ ಶಿವಳ್ಳಿ, ಶಿವರಾಜ ವಡ್ಡರ, ಹನುಮವ್ವ ವಡ್ಡರ, ತಿಪ್ಪವ್ವ ವಡ್ಡರ, ಅಂಗನವಾಡಿ ಸಹಾಯಕಿ ಜಿ ಎ ಹರಿಗೊಂಡ, ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ