ಬಳ್ಳಾರಿ

ಸೋಮಸಮುದ್ರ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹ

ಸೋಮಸಮುದ್ರ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹ

ಲೋಕದರ್ಶನ ವರದಿ 

ಬಳ್ಳಾರಿ 26: ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಿಂದ ಬಳ್ಳಾರಿ ತಾಲೂಕಿನ ಸೋಮಸಮುದ್ರ ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಕೆ.ಎಸ್‌.ಆರ್‌.ಟಿ.ಸಿ ಡಿಪೋ ಮುಂದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ, ಡಿ.ಟಿ.ಓ. ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 


ಪ್ರತಿಭಟನೆಯ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಗುರಳ್ಳಿ ರಾಜ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದೇ ಪ್ರತಿದಿನ ಶಾಲಾ ಹಿ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದ್ದು, ಬಸ್ಸು ಇಲ್ಲದೆ, ಒಂದೇ ಬಸ್ಸಿನಲ್ಲಿ ನೂರುಕ್ಕು ಹೆಚ್ಚು ವಿದ್ಯಾರ್ಥಿಗಳು ಬಾಗಿಲುನಲ್ಲಿ ನೆತಾಡುವಂತಾಗಿದೆ. ಹಾಗೂ ಕೆಲವೊಮ್ಮೆ ಬಸ್ ಚಲಿಸುವಾಗ ವಿದ್ಯಾರ್ಥಿಗಳು ಬಿಳುವ ಸಂದರ್ಭ ಕೂಡಾ ಎದುರಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಎರಡು-ಮೂರು ತರಗತಿಗಳಿಗೆ ಹಾಜರಿ ಹಾಗುವುದು ತುಂಬಾ ಕಷ್ಟವಾಗಿದೆ. ಈ ಎಲ್ಲಾ ತೊಂದರೆಗಳಿಂದ ವಿದ್ಯಾರ್ಥಿಗಳ ಜೀವಕ್ಕೂ ಹಾಗೂ ಶಿಕ್ಷಣಕ್ಕು ಹಾನಿ ಉಂಟಾಗುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ಬೆಳಿಗ್ಗೆ 8ಗಂಟೆಗೆ ಸೋಮಸಮುದ್ರದಿಂದ ಬಳ್ಳಾರಿಗೆ ಬಸ್ಸು ವ್ಯವಸ್ಥೆ ಕಲ್ಲಿಸಬೇಕು ಹಾಗೂ ಪ್ರತಿದಿನ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು. 


ಮನವಿ ಸ್ವಿಕರಿಸಿದ ಡಿಪೋ ಅಧಿಕಾರಿಗಳಾದ ಡಿಟಿಓ ಚಂದ್ರಶೇಖರ್ ರವರು ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. 

ಈ ಪ್ರತಿಭಟನೆಯಲ್ಲಿ ಂಋಖಓ ಜಿಲ್ಲಾ ಉಪಾದ್ಯಕ್ಷರಾದ ಜೆ.ಸೌಮ್ಯ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ನಿಹಾರಿಕ ಮತ್ತು ಸದಸ್ಯಇ. ಪ್ರಮೋದ್, ಲಕ್ಷ್ಮಿ ಹಾಗೂ ಗ್ರಾಮಸ್ತರಾದ ಕೆಂಚಪ್ಪ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ