ಹಗರಿಬೊಮ್ಮನಹಳ್ಳಿ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ 30: ಪಟ್ಟಣದ ದಲಿತ ಹಕ್ಕುಗಳ ತಾಲೂಕು ಸಮಿತಿಯು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ ದೌರ್ಜನ್ಯಕ್ಕೋಳಗಾದವರಿಗೆ ಪರಿಹಾರ ನೀಡುವಂತೆ ಮತ್ತು ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿ ತಾಹಶಿಲ್ದಾರ್‌ಗೆ ಬುಧವಾರ ಪ್ರತಿಭಟನಾ ಮನವಿ ನೀಡಿತು. 

ಈ ಸಂಧರ್ಭದಲ್ಲಿ ತಾಲೂಕು ಸಮಿತಿಯ ಸಂಚಾಲಕಿ ಮಾಳಮ್ಮ ಮಾತನಾಡಿ ದಲಿತರ ಮೇಲಿನ ದೌರ್ಜನ್ಯ ವಿರೋಧಿ ಸಭೆ ಕರೆಯಲು ಮುಖ್ಯ ಮಂತ್ರಿಗಳು ಮುಂದಾಗಬೇಕು,ದೌರ್ಜನ್ಯ ಎಸೆಗುವವರ ವಿರುಧ್ಧ ಎಸ್‌ಸಿ,ಎಸ್ಟಿ ಕಾಯ್ದೆಅಡಿಯಲ್ಲಿಬಂಧಿಸಬೇಕು, ದೌರ್ಜನಕ್ಕೊಳಗಾದ ಕುಟುಂಬಗಳಿಗೆ ತಲ 5ಲಕ್ಷ ಪರಿಹಾರ ನೀಡಬೇಕು, ದಲಿತರ ಮೇಲಿನ ದೌರ್ಜನ್ಯ ವಿರೋಧಿ ಸಮಿತಿಗಳನ್ನು ಜಿಲ್ಲಾಧಿಕಾರಿಗಳು ಕೂಡಲೇ ಕರೆಯಬೇಕು, ಸಮಾಜ ಕಲ್ಯಾಣ ಇಲಾಖೆ ಕರೋನ ಸಂಕಷ್ಟದಲ್ಲೂ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ, ಇಂತಹ ದಲಿತ ವಿರೋಧಿ ರಾಜ್ಯ ಸರಕಾರದ ಧೋರಣೆಯನ್ನು ದಲಿತ ಹಕ್ಕುಗಳ ತಾಲೂಕು ಸಮಿತಿಯು ಬಲವಾಗಿ ಖಂಡಿಸುತ್ತದೆ ಹಾಗೂ ದಲಿತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರಿಗಿಸಬೇಕೆಂದು ಆಗ್ರಹಿಸಿದರು. 

ಈ ಸಂಧರ್ಭದಲ್ಲಿ ಚಾಂದ್‌ಬೀ, ಮೈಲಮ್ಮ, ಬಿ.ಜ್ಯೋತಿ, ಸಣ್ಣ ಹನುಮಂತಪ್ಪ, ರಂಗಪಗಪ,  ಇನ್ನಿತರರಿದ್ದರು. 


ಸುದ್ದಿ ಓದಿ