ತಾಳಿಕೋಟಿ

ದಲಿತಪರ ಸಂಘಟನೆ ಒಕ್ಕೂಟದಿಂದ ಪ್ರತಿಭಟನಾ ರಾ​‍್ಯಲಿ

ದಲಿತಪರ ಸಂಘಟನೆ ಒಕ್ಕೂಟದಿಂದ ಪ್ರತಿಭಟನಾ ರಾ​‍್ಯಲಿ

ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ತಾಲೂಕಾಡಳಿತಕ್ಕೆ ಮನವಿ. 

ತಾಳಿಕೋಟಿ: ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಯ ಮೂಲ ಅಸ್ಪೃಶ್ಯರನ್ನು ಉಳಿಸಿ ಉಳಿದ ಜಾತಿಯವರನ್ನು ಕೈಬಿಡಬೇಕು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಲ್‌.ಪಿ.ಎಸ್‌. ಯೋಜನೆಯು ಸುಮಾರು ವರ್ಷ ಅನುದಾನವಿಲ್ಲದೆ ಅರ್ಜಿಗಳು ನಿಂತು ಹೋಗಿವೆ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರಾ​‍್ಯಲಿ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  

ಮನವಿ ಸಲ್ಲಿಕೆಗೂ ಮುನ್ನ ಅಂಬೇಡ್ಕರ್ ಭವನದಿಂದ ಪ್ರತಿಭಟನಾ ರಾ​‍್ಯಲಿಯನ್ನು ಆರಂಭಿಸಿ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತ ಕತ್ರಿ ಬಜಾರ್ ಶಿವಾಜಿ ಸರ್ಕಲ್‌ದಿಂದ ಬಸ್‌ನಿಲ್ದಾಣ ಮಾರ್ಗವಾಗಿ ವಿಜಯಪುರ ಸರ್ಕಲ್‌ಗೆ ಆಗಮಿಸಿ ಅಲ್ಲಿ ಕೆಲಸಮಯ ಮಾನವ ಸರಪಳಿಯನ್ನು ನಿರ್ಮಿಸಿ ವರದಿಯ ಜಾರಿಗೆ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ ದಲಿತ ಮುಖಂಡ ಜೈಭೀಮ್ ಮುತ್ತಗಿ ಮಾತನಾಡಿ ಕಳೆದ ಎರಡು ದಶಕಗಳಿಂದ ಸದಾಶಿವ ಆಯೋಗಗದ ವರದಿ ಜಾರಿಗೆ ಆಗಿಲ್ಲ. ಇದು ನಮ್ಮನ್ನು ಆಳುವವರ ಇಚ್ಛಾಶಕ್ತಿಯನ್ನು ಎತ್ತಿ ತೋರಿಸುತ್ತದೆ. ವರದಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ. ಆದರೆ ಇದೆಲ್ಲವನ್ನು ಗಾಳಿಗೆ ತೂರಲಾಗುತ್ತಿದೆ. ಇಲ್ಲಿ ಮೂಲ ಅಸ್ಪೃಶ್ಯರಿಗೆ ಅನ್ಯಾಯವಾಗುತ್ತಿದೆ. ಇಂದು ನಾವೆಲ್ಲರೂ ಒಂದಾಗಿದ್ದೇವೆ. ನಮ್ಮ ಹಕ್ಕು ನೀಡದಿದ್ದಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.  

ಮುಖಂಡ ತಿಪ್ಪಣ್ಣ ಮಾದರ (ಅಸ್ಕಿ), ದೇವೆಂದ್ರ ಹಾದಿಮನಿ, ಎಂ.ಆರ್‌. ದೊಡ್ಡಮನಿ ಮಾತನಾಡಿ ನಮ್ಮ ನ್ಯಾಯಯುತವಾದ ಹಕ್ಕು ಸಿಗದೇ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಿ ಮುಂಬರಲಿರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.  ದಲಿತ ಮುಖಂಡ ಪುರಸಭೆ ಸದಸ್ಯ ಮುತ್ತಪ್ಪ ಚಮಲಾಪೂರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ಪರಶುರಾಮ ಕೂಚಬಾಳ, ರಾಮಣ್ಣ ಮಾದರ, ಯಮನಪ್ಪ ಮಾದರ, ಬಸವರಾಜ ಗುಂಡ್ಕನಾಳ, ದೇವು ಗೊಟಗೊಂಡಖಿ, ಗುರುಪ್ರಸಾದ್ ಬಿ.ಜೆ., ಭಾಗಪ್ಪ ಬಿಳೇಭಾವಿ, ಗೋಪಾಲ ಕಟ್ಟಿಮನಿ, ಮಾಳಪ್ಪ ಬಿಳೇಬಾವಿ, ಪರಶುರಾಮ ಸಾಗರ ಮಹಾದೇವ ಸಾಲವಾಡಗಿ, ಮಲ್ಲು ತುಂಬಗಿ, ಚನ್ನಪ್ಪ ಪೀರಾಪೂರ, ರಮೇಶ ಹಡಗಿನಾಳ, ಬಸವರಾಜ ಅಗ್ನಿ, ಬಸ್ಸು ಕಟ್ಟಿಮನಿ (ಮಾದರ), ಸುನೀಲ ಕಲಕೇರಿ, ಸಂತೋಷ ದೊಡಮನಿ ಭಾಗವಹಿಸಿದ್ದರು. 


ಸುದ್ದಿ ಓದಿ