ಬಳ್ಳಾರಿ

ದಿ. 27ರಂದು ಭಾರತ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ

ದಿ. 27ರಂದು ಭಾರತ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ

ಬಳ್ಳಾರಿ 24: ಎಡ ಹಾಗೂ ಪ್ರಜಸತ್ತಾತ್ಮಾಕ ಪಕ್ಷಗಳ ಒಕ್ಕೂಟ ವತಿಯಿಂದ ಸಂಯುಕ್ತ ಕಿಸಾನ್ ಮೋರ್ಚಾ ದಿ. 27ರಂದು ಕರೆ ನೀಡಿರುವ ಅಖಿಲ ಭಾರತ ಬಂದ್‌ಗೆ ಬೆಂಬಲಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ಸರಕಾರ ರಾಜ್ಯದಲ್ಲಿ ಲೂಟಿಕೋರ ಕಾರ​‍್ೊರೇಟ್ ಕಂಪೆನಿಗಳ ಒತ್ತಡಕ್ಕೆ ಮಣಿದು ಲೂಟಿಯ ಪರವಾದ ಜಾಗತೀಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸುತ್ತಿರುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ. 

ಕರ್ನಾಟಕ ಸರ್ಕಾರ ಕಳೆದ ವರ್ಷ ರಾಜ್ಯದ ಜನತೆ ಕೋವಿಡ್ ಸಂಕಷ್ಟದಲ್ಲಿರುವಾಗ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ನಿಯಮಾವಳಿಯಂತೆ ವಿಶೇಷ ಚರ್ಚೆಗೆ ಒಳಪಡಿಸದೇ ಅದೇ ರೀತಿ, ಅಂತಹ ಕಾಯ್ದೆಗಳಿಂದ ಭಾದಿತರಾಗುವ ಜನ ಸಮುದಾಯಗಳು ಮತ್ತು ತಜ್ನರುಗಳು, ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಜೊತೆ ವ್ಯಾಪಕ ಚರ್ಚೆಗೊಳಪಡಿಸದೇ ಸಂಚಿನಂತೆ ತರಾತುರಿಯಲ್ಲಿ ಮತ್ತು ಅಧಿವೇಶನಗಳ ಕೊನೆಯ ಹಂತಗಳಲ್ಲಿ ಮೂರು ರೈತ ವಿರೋಧಿ, ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ. 

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಪರಂಪರೆಯಿಂದ ರೈತರ ವಶದಲ್ಲಿದ್ದು ಉದ್ಯೋಗದ ಭದ್ರತೆಯನ್ನೊದಗಿಸುತ್ತಿದ್ದ ಕೃಷಿ ಭೂಮಿಗಳನ್ನು ಬಲವಂತವಾಗಿ ಲೂಟಿಕೋರ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿಕರಲ್ಲದ ಶ್ರೀಮಂತರ ಕೈಗೆ ವರ್ಗಾಯಿಸುತ್ತದೆಇದು ಗ್ರಾಮೀಣ ಜನತೆಯನ್ನು ತೀವ್ರ ಭಾಧೆಗೀಡು ಮಾಡಿ ಅವರ ಹಸಿವಿನ ಸಾವುಗಳನ್ನು ಮತ್ತು ಆತ್ಮಹತ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ. 

ಅದೇ ರೀತಿ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಕೃಷಿ ಉತ್ಪನ್ನಗಳ ಬೆಲೆಗಳನ್ನು ಏರಿಳಿತ ಮಾಡಿ ರೈತರನ್ನು ಲೂಟಿಗೊಳಪಡಿಸುವ ದೊಡ್ಡ ವರ್ತಕರು ಮತ್ತು ಕಾರ​ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಲಿದೆ.  ಇದು ಕೆಲವೇ ವರ್ಷಗಳಲ್ಲಿ  ರೈತರನ್ನು ಮತ್ತು ಕೃಷಿ ಆಧರಿಸಿದ ಎಲ್ಲ ಗ್ರಾಮೀಣ ಜನತೆಯ ಬದುಕನ್ನು ಕಿತ್ತುಕೊಳ್ಳಲಿದೆ. ರಾಜ್ಯದ ಸಾರ್ವಜನಿಕ ಒಡೆತನದ ನೂರಾರು ಎಪಿಎಂಸಿಗಳ ಹಲವು ದಶ ಸಾವಿರ ಕೋಟಿ ಮೊತ್ತದ ಬೆಲೆಬಾಳುವ ಆಸ್ತಿಗಳನ್ನು ಕೊಳ್ಳೆಹೊಡೆಯಲು ನೆರವಾಗಲಿದೆ. ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ-2020 ರಾಜ್ಯದ ಹೈನುಗಾರಿಕೆಯನ್ನು ಹೊರಯಾಗಿಸಿ ಅವರನ್ನು ಹೊರದೂಡಲಿದೆ.  ಸರ್ವಜನಿಕ ರಂಗದ ಹೈನು ಉದ್ಯಮವಾದ ಕರ್ನಾಟಕ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾಶ ಮಾಡಿ, ಕಾರ​‍್ೋರೇಟ್ ಲೂಟಿಗೆ ನೆರವಾಗಲಿದೆ.  ದಲಿತರು, ಅಲ್ಪಸಂಖ್ಯಾತರು ಮತ್ತಿತರರ ಆಹಾರದ ಹಕ್ಕನ್ನು ಕಸಿದುಕೊಂಡು ಈ ಬಡವರಿಗೆ ಪೌಷ್ಟಿಕ ಆಹಾರ ದೊರೆಯದಂತೆ ಆಕ್ರಮಣ ಮಾಡಲಿದೆ. 

ತೀವ್ರ ಸಂಕಷ್ಟದಲ್ಲಿರುವ ಜನತೆಯ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ಹೊರೆಯೂ ಸೇರಿದಂತೆ ಈ ಎಲ್ಲವುಗಳನ್ನು ತಡೆಯಲು ಮುಂದಾಗದೇ ತಮ್ಮ ಸರಕಾರ ಬೆಂಬಲಿಸುತ್ತಿರುವುದು ಮತ್ತು ಅವುಗಳಿಗೆ ಪೂರಕವಾಗಿ ಈ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ. 

ಅಕಒ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಅಕಋ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ರಾವ್ ಖಗಅಋಅ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.  

ಪ್ರತಿಭಟನೆಯಲ್ಲಿ ಖಗಅಋಅ ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಮತ್ತು ಈ ಸಂದರ್ಭದಲ್ಲಿ ಖಗಅಋಅ ಜಿಲ್ಲಾ ಸಮಿತಿ ಸದಸ್ಯರಾದ ಒ.ಓ.ಮಂಜುಳಾ, ಆರ್‌. ಸೋಮಶೇಖರ್ ಗೌಡ,  ಅಕಋ ನ ಮುಖಂಡರು ಇಸ್ಮಾಯಿಲ್, ಚೆನ್ನಪ್ಪ, ಅಕಋ ನ ಸತ್ಯಬಾಬು ಮತ್ತು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ