ಮುಂಡರಗಿ

ದಿ. 28 ರಂದು ಸಕ್ಕರೆ ಕಾರ್ಖಾನೆ ಎದುರು ಕಬ್ಬಿನ ಬೆಲೆ ನಿಗದಿಗೋಸ್ಕರ ಹೊರಾಟ

ದಿ. 28 ರಂದು ಸಕ್ಕರೆ ಕಾರ್ಖಾನೆ ಎದುರು ಕಬ್ಬಿನ ಬೆಲೆ ನಿಗದಿಗೋಸ್ಕರ ಹೊರಾಟ

ಮುಂಡರಗಿ 27 : ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಅ.28 ರಂದು ವಿಜಯನಗರ ಸಕ್ಕರೆ ಕಾರ್ಖಾನೆ ಎದುರು ಕಬ್ಬಿನ ಬೆಲೆ ನಿಗದಿಗೋಸ್ಕರ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹವನ್ನು ಮುಂಡರಗಿ ತಾಲೂಕು ದಂಡಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಏಳು ದಿನಗಳ ಕಾಲ ಅವಕಾಶ ಕೇಳಿದ್ದಾರೆಂಬ ಕಾರಣದಿಂದ ಧರಣಿಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಕಬ್ಬು ಬಳಗಾರ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ತಿಳಿಸಿದರು. 

ಪಟ್ಟಣದಲ್ಲಿ ಮುಂಡರಗಿ ತಾಲೂಕ ದಂಡಾಧಿಕಾರಿಗಳು ರಾಜ್ಯ ಕಬ್ಬು ಬೆಳೆಗಾರರ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್ ಜೊತೆ ದೂರವಾಣಿ ಮೂಲಕ ಮಾತನಾಡಿ ಸಕ್ಕರೆ ಕಾರ್ಖಾನೆಯವರು ಇನ್ನೂ ಏಳು ದಿನಗಳ ಕಾಲ ಕಾಲಾವಕಾಶ ಕೇಳಿದ್ದಾರೆ. ನಂತರದಲ್ಲಿ ನಿಗದಿತ ಬೆಲೆಯನ್ನು ಘೋಷಿಸದೇ ಇದ್ದಲ್ಲಿ ನ.4 ರಂದು ಮತ್ತೇ ಹೋರಾಟ ಮಾಡಲು ಅವಕಾಶ ನೀಡಲಾಗುವುದೆಂದು ತಾಲೂಕು ದಂಡಾಧಿಕಾರಿಗಳು ತಿಳಿಸಿರುತ್ತಾರೆ. ಆದಕಾರಣ ಈ ಧರಣಿ ಸತ್ಯಾಗ್ರಹವನ್ನು ಮುಂದಿನ ಏಳು ದಿನಗಳ ಕಾಲ ಮುಂದೂಡಲಾಗಿದೆ ಎಂದು ರಾಜ್ಯ ಕಬ್ಬು ಬಳಗಾರ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್ ಹಾಗೂ ಗದಗ ಜಿಲ್ಲೆ, ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ. 


ಸುದ್ದಿ ಓದಿ