ಬಳ್ಳಾರಿ

ಬಿಸಿಯೂಟ ನೌಕರರಿಗೆ ಪ್ಯಾಕೇಜ್‌ಗೆ ಆಗ್ರಹಿಸಿ ಪ್ರತಿಭಟನೆ

ಬಿಸಿಯೂಟ ನೌಕರರಿಗೆ ಪ್ಯಾಕೇಜ್‌ಗೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ 18: ಬಿಸಿಯೂಟ ನೌಕರರಿಗೆ ಕೋವಿಡ್ ಪ್ಯಾಕೇಜ್‌ಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ ಮಾಡಲಾಯಿತು. ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯಮಂತ್ರಿಯವರಿಗೆ ಕಳುಹಿಸಲಾಯಿತು.  

ಈ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘದ ಎಸ್‌.ಜಿ ನಾಗರತ್ನ ರವರು ಮಾತನಾಡುತ್ತಾ ತಮ್ಮ ಸರ್ಕಾರ ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸುವಾಗ ಸ್ಕೀಂ ನೌಕರರಾದ ಆಶಾ ಹಾಗೂ ಅಂಗನವಾಡಿ ನೌಕರರಿಗೆ ವಿಸ್ತರಿಸಿರುವುದನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ. ಆದರೆ ಅದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಅತ್ಯಂತ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಬಿಸಿಯೂಟ ನೌಕರರನ್ನು ಕೈ ಬಿಟ್ಟಿರುವುದಕ್ಕೆ ಅತ್ಯಂತ ವಿಷಾದವನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇವೆ.  

ಕೊರೋನಾ  ಮಹಾಮಾರಿ ಪಿಡುಗಿಗೆ ಅತ್ಯಂತ ಹೆಚ್ಚು ಜೀವ ಹಾಗೂ ಜೀವನೋಪಾಯವನ್ನು ಕಳೆದುಕೊಂಡಿರುವುದು ದುಡಿಯುವ ವರ್ಗ ಹಾಗೆಯೇ ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವವರು ಬಿಸಿಯೂಟ ನೌಕರರು ಯಾವುದೇ ಉಪಕಸುಬು ಇಲ್ಲದೆ ಇವರ ಕುಟುಂಬ ತತ್ತರಿಸಿ ಹೋಗಿದೆ. ಹಾಗಾಗಿ ತಾವು ಇವರಿಗೂ ಸಹ ಸಂಕಷ್ಟದ ಪ್ಯಾಕೇಜನ್ನು ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. 


ಸುದ್ದಿ ಓದಿ