ಬಳ್ಳಾರಿ

ಬಡ ಕುಟುಂಬಗಳಿಗೆ ನಿವೇಶನ, ವಸತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಬಡ ಕುಟುಂಬಗಳಿಗೆ ನಿವೇಶನ, ವಸತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಬಳ್ಳಾರಿ 16: ತಾಲ್ಲೂಕಿನ ವೈ.ಕಗ್ಗಲ್ಲು ಗ್ರಾಮದಲ್ಲಿ ವಾಸ ಮಾಡುವ ಬಡ ಕುಟುಂಬಗಳು ನಿವೇಶನ ಮತ್ತು ವಸತಿ ನೀಡುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ದಿ. 16ರಂದು ಪರಮದೇವನಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.  

 

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ದೇಶದಲ್ಲಿ ನಾಗರಿಕರೆಲ್ಲರಿಗೂ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆ ಕಲ್ಪಿಸುವುದು ನಮ್ಮ ಸಂವಿಧಾನದ  ಮೂಲ ಆಶಯಗಳಲ್ಲಿ ಒಂದಾಗಿದೆ. ಆದರೆ ದೇಶಕ್ಕೆ ಸ್ವಾತಂತ್ರ ಲಭಿಸಿ ಏಳು ದಶಕಗಳು ಕಳೆದರೂ ಈ ಆಶಯ ಇನ್ನೂ ಈಡೇರಲಿಲ್ಲ. ಪ್ರಜೆಗಳ ಘನತೆಯ ಬದುಕಿಗಾಗಿ ಕನಿಷ್ಠ ಸ್ವಂತ ನಿವೇಶನ ಮತ್ತು ವಸತಿ ಒದಗಿಸುವಲ್ಲಿ ನಮ್ಮ ಆಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮ ಹಿತಕ್ಕಾಗಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಆಗಾಗ ಜಾರಿಗೆ ತರುವ ಅಂಬೇಡ್ಕರ್ ಅವಾಸ್ ಆಶ್ರಯ ಮತ್ತು ಇತರೆ ಯೋಜನೆಗಳು ತಮ್ಮ ರಾಜಕೀಯ ಮುಖಂಡರ ಬಾಲ ಬುಡುಕರು ಹೇಳಿದವರಿಗೆ ಮಾತ್ರ ದೊರೆಯುತ್ತದೆ. ನಿಜವಾದ ಫಲಾನುಭವಿಗಳಿಗೆ ದೊರಕದಂತಾಗಿದೆ. ಬಳ್ಳಾರಿ ತಾಲೂಕಿನ ವೈ.ಕಗ್ಗಲ್ಲು ಗ್ರಾಮದಲ್ಲಿನ ಸುಮಾರು 50ಕ್ಕೂ ಹೆಚ್ಚು ಬಡ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದು ಅವರಿಗೆ ಸರ್ಕಾರದ ವತಿಯಿಂದ ಗ್ರಾಮ ಪಂಚಾಯತಿ ವತಿಯಿಂದ ಯಾವುದೇ ಸೌಲಭ್ಯವೂ ದೊರೆಯದೇ ವಂಚಿತರಾಗಿದ್ದಾರೆ ಎಂದು. 

ಸುಮಾರು ವರ್ಷಗಳಿಂದ ಅನೇಕ ಬಡ ಕುಟುಂಬಗಳು ಚರಂಡಿ ಪಕ್ಕದಲ್ಲಿ, ರಸ್ತೆ ಪಕ್ಕದಲ್ಲಿ, ಬಾಡಿಗೆ ಮನೆಗಳಲ್ಲಿ ಹಾಗೂ ಅವಿಭಕ್ತ ಕುಟುಂಬಗಳಲ್ಲಿ ವಾಸ ಮಾಡಲು ನಿವೇಶನ ಮತ್ತು ವಸತಿ ಇಲ್ಲದೇ ಅನುಕೂಲವಿಲ್ಲದ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ವಿಷಯವನ್ನು ಇದೀಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿ ಅವರಿಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು. 

 

ಈ ಕೂಡಲೇ ಗ್ರಾಮ ಠಾಣೆಗೆ ಒಳಪಡುವ ಭೂಮಿಯಾಗಲೀ ಮತ್ತು ಗ್ರಾಮಕ್ಕೆ ಹತ್ತಿರ ಇರುವ ಭೂಮಿಯನ್ನು ಖರೀದಿ ಮಾಡಿಯಾಗಲೀ, ಆ ಭೂಮಿಯನ್ನು ನಿವೇಶನಗಳನ್ನಾಗಿ ಮಾರಿ​‍್ಡಸಿ, ಹಂಚಬೇಕೆಂದು ಸರ್ಕಾರ ಭೂಮಿಗೆ ತಕ್ಕ ಬೆಲೆ ಕೊಡುತ್ತಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿಕೊಳ್ಳುವುದೇನೆಂದರೆ ಈಗಿನ ಅರ್ಜಿಗಳನ್ನು ಪರೀಶೀಲನೆ ಮಾಡಿ, ಇಲ್ಲಿಯವರೆಗೆ ಸಲ್ಲಿಸಿರುವ ಅರ್ಜಿಗಳ ಸಂಪೂರ್ಣ ಮಾಹಿತಿಯನ್ನು ಬಳ್ಳಾರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬೇಕೆಂದು, ಅಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿವೇಶನ ರಹಿತರಿಗೆ ನಿವೇಶನ ವಸತಿಯನ್ನು ಮಂಜೂರು ಮಾಡಬೇಕೆಂದು ಎಲ್ಲಾ ಅರ್ಜಿದಾರರ ಪರವಾಗಿ ಈ ಮೂಲಕ ಡಿವೈಎಫ್‌ಐ ಬಳ್ಳಾರಿ ತಾಲೂಕು ಸಮಿತಿ ಒತ್ತಾಯಿಸಿತು. 

 


 

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡ ಯು.ಎರಿ​‍್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಶಂಕರಗೌಡ, ಕಾರ್ಯದರ್ಶಿ ಹೊನ್ನೂರುಸಾಬ್, ಉಪಾಧ್ಯಕ್ಷರು ಗೋಟೂರು ವೆಂಕಟೇಶ್, ಸಹ ಕಾರ್ಯದರ್ಶಿ ಬೈಲ ಹನುಮಂತ, ಖಜಾಂಚಿ ಬಿ.ಪಿ.ನವೀನ್, ವೈ.ಕಗ್ಗಲ್ಲು ಗ್ರಾಮ ಘಟಕದ ಅಧ್ಯಕ್ಷ ತಿಪ್ಪಯ್ಯ, ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ