ಬಳ್ಳಾರಿ

ಕೇಂದ್ರ ಸರ್ಕಾರ ಎಚ್‌ಯುಐಡಿ ಕೈಬಿಡಬೇಕೆಂದು ಪ್ರತಿಭಟನೆ

ಕೇಂದ್ರ ಸರ್ಕಾರ ಎಚ್‌ಯುಐಡಿ ಕೈಬಿಡಬೇಕೆಂದು ಪ್ರತಿಭಟನೆ

ಲೋಕದರ್ಶನ ವರದಿ 

ಕಂಪ್ಲಿ 23: ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿ ಆಭರಣಗಳ ಮೇಲೆ ವಿಧಿಸಿರುವ ಎಚ್‌ಯುಐಡಿ(ಹಾಲ್‌ಮಾರ್ಕ್‌ ಯೂನಿಕ್ಯೂವ್ ಐಡಿಂಟಿಫಿಕೇಷನ್ ನಂಬರ್)ಪದ್ಧತಿಯನ್ನು ಕೈಬಿಡಬೇಕು ಎಂದು ಇಲ್ಲಿನ ಸರಾಫ್ ವರ್ತಕರು ಮತ್ತು ಕೆಲಸಗಾರರ ಸಂಘದ ಕಾರ್ಯದರ್ಶಿ ಡಿ.ಮೌನೇಶ್ ಒತ್ತಾಯಿಸಿದರು ತಹಸೀಲ್ದಾರ್ ಗೌಸಿಯಾಬೇಗಂ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ಎಚ್‌ಯುಐಡಿ ಪದ್ಧತಿ ಗೊಂದಲದಿಂದ  ಕೂಡಿದ್ದು ಗ್ರಾಹಕರಿಗೆ ಮತ್ತು ಅಭರಣೋಧ್ಯಮಿಗಳಿಗೆ ತುಂಬ ತೊಂದರೆಯಾಗುತ್ತದೆ ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಅಭರಣೋಧ್ಯಮಿಗಳನ್ನು ನೆಲಸಮ ಮಾಡುತ್ತದೆ. ಹಲವು ಕಾರಣಗಳಿಂದ ಎಚ್‌ಯುಐಡಿ  ಸಮರ​‍್ಕವಾಗಿಲ್ಲದ ಕಾರಣ ಕೈಬಿಡಬೇಕು ಎಂದು ಆಗ್ರಹಿಸಿದರು.  


ಪಟ್ಟಣದ ಎಲ್ಲಾ ಬೆಳ್ಳಿ ಬಂಗಾರದ ಅಂಗಡಿಗಳನ್ನು ಒಂದು ತಾಸು ಬಂದ್ ಮಾಡಿ ಪ್ರತಿಭಟಿಸಿ ನಂತರ ಮನವಿ ಸಲ್ಲಿಸಿದರು. ಸರಾಫ್ ವರ್ತಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಜಗದೀಶ್ ಜಿ.ರಾಯ್ಕರ್, ಉಪಾಧ್ಯಕ್ಷರಾದಡಿ.ಎ.ರುದ್ರಾ​‍್ಪಚಾರ್, ಎಸ್‌.ಎಸ್‌.ಮಾರುತಿ, ಖಚಾಂಚಿ ಡಿ.ರಾಘವೇಂದ್ರಾಚಾರ್,ಉಪಕಾರ್ಯದರ್ಶಿ ಭಜರಂಗಿ,ನಿರ್ದೇಶಕರಾದ ಶ್ರೀನಿವಾಸ್ ಕಾಗಲ್ಕರ್, ಡಿ.ಎ.ರವಿ, ರಾಜೇಶ್ ಕಾಗಲ್ಕರ್, ರಾಘವೇಂದ್ರ ರಾಯ್ಕರ್, ಮಕ್ಬೂಲ್, ಪ್ರಹ್ಲಾದಾಚಾರ್, ಗಣೇಶ್ ರಾಯ್ಕರ್ ಸೇರಿ ಅನೇಕರಿದ್ದರು. 


ಸುದ್ದಿ ಓದಿ