ತಾಳಿಕೋಟಿ

ಪುರಸಭೆಯಲ್ಲಿನ ಭ್ರಷ್ಟಾಚಾರ ,ಅವ್ಯವಹಾರದ ತನಿಖೆಗಾಗಿ ಒತ್ತಾಯಿಸಿ ಪ್ರತಿಭಟನೆ : ಜಿಲ್ಲಾಧಿಕಾರಿ ಕಚೇರಿಯವರೆಗೆ ನಾಳೆ ತೆಲೆಯ ಮೇಲೆ ಕಲ್ಲು ಹೊತ್ತುಕೊಂಡು ಪಾದಯಾತ್ರೆ

ಪುರಸಭೆಯಲ್ಲಿನ ಭ್ರಷ್ಟಾಚಾರ ,ಅವ್ಯವಹಾರದ ತನಿಖೆಗಾಗಿ ಒತ್ತಾಯಿಸಿ ಪ್ರತಿಭಟನೆ : ಜಿಲ್ಲಾಧಿಕಾರಿ ಕಚೇರಿಯವರೆಗೆ ನಾಳೆ ತೆಲೆಯ ಮೇಲೆ ಕಲ್ಲು ಹೊತ್ತುಕೊಂಡು ಪಾದಯಾತ್ರೆ


ತಾಳಿಕೋಟೆ03: ಪಟ್ಟಣಕ್ಕೆ ಹೊಂದಿಕೊಂಡಿರುವ ಹಡಗಿನಾಳ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡೋಣಿ ನದಿ ಸೇತುವೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆ ಬಸ್ ನಿಲ್ದಾಣದವರೆಗೆ ನೇರವಾಗಿ ರಸ್ತೆ ನಿರ್ಮಾಣ ಮಾಡಿ ಎರಡೂ ಬದಿಗೆ ಸರ್ವಿಸ್ ರಸ್ತೆಯನ್ನು ಮಾಡಬೇಕು ಮತ್ತು ಪುರಸಭೆಯಲ್ಲಿನ ಭ್ರಷ್ಟಾಚಾರ ಹಾಗೂ ಅವ್ಯವಹಾರದ ತನಿಖೆಗಾಗಿ ಒತ್ತಾಯಿಸಿ ಪಟ್ಟಣದಿಂದ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅ.5 ರಂದು ತೆಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ ಹೇಳಿದರು. 

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರೀಲ್‌ದಲ್ಲಿ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಅಧಿಕಾರಿಗಳು ಬಂದು ಒಂದು ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ 3 ತಿಂಗಳೂ ಗತಿಸಿದರೂ ಸಹಿತ ಅಧಿಕಾರಿಗಳು ಯಾವುದೇ ಕ್ರಮ ಕೈಕೊಂಡಿಲ್ಲ. ಮತ್ತೆ ಹೋರಾಟ ಮಾಡುವದು ಅನಿವಾರ್ಯವಾಗಿದೆ. ಹಿಗಾಗಿ ಅ.5 ರುಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಿಂದ ತಲೆಯ ಮೇಲೆ ಕಲ್ಲುಹೊತ್ತುಕೊಂಡು ಪಾದಯಾತ್ರೆಯನ್ನು ಆರಂಭಿಸಲಾಗುವದು. 

ಪಾದಯಾತ್ರೆಯು ಅ.8 ರಂದು ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಲೆಯ ಮೇಲೆ ಕಲ್ಲುಹೊತ್ತುಕೊಂಡು ಪ್ರತಿಭಟನೆ ನಡೆಸಲಾಗುವದು. ಒಂದು ವಿಷಯದಲ್ಲಿ ಒಮ್ಮೆ ಹೋರಾಟ ನಡೆಸುವದೇ ದುರ್ಲಭವಾಗಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಮತ್ತೊಮ್ಮೆ ಹೋರಾಟ ಮಾಡಬೇಕಾಗಿರುವದು ವಿಷಾಧ ಸಂಗತಿಯಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಿರ್ಲಕ್ಷ ತೋರುತ್ತಿದ್ದಾರೆ. ರಸ್ತೆಯನ್ನು ನೇರವಾಗಿ ಮಾಡುವ ಭರವಸೆ ನೀಡಿದ್ದರೂ ಸಹಿತ ನೇರವಾಗಿ ರಸ್ತೆಯನ್ನು ಮಾಡುತ್ತಿದ್ದಾರೆ. ಇನ್ನು ಪಟ್ಟಣದ ಪುರಸಭೆ ವತಿಯಿಂದ ಜಿ+1 ಮಾದರಿ(ಆಶ್ರಯ) 600 ಮನೆಗಳ ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗುವದು ಎಂದು ಫಲಾನುಭವಿಗಳಿಂದ ಹಣ ಭರಣಾ ಮಾಡಿಕೊಂಡು 5 ವರ್ಷಗಳು ಗರಿತಿಸಿದರೂ ಸಹಿತ ಯಾವುದೇ ಕ್ರಮ ಕೈಕೊಂಡಿಲ್ಲ. ಎಲ್ಲಿ ಮನೆ ನಿರ್ಮಾಣ ಮಾಡಲಾಗುವದು ಎಂದು ಸ್ಪಷ್ಟತೆ ಇಲ್ಲ. ಮನೆಗಳ ನಿರ್ಮಾಣ ಕಾರ್ಯವೂ ಸಹಿತ ಆರಮಭವಾಗಿಲ್ಲ. ಇದರಿಂದ ಬಡವರು ಬಡ್ಡಿ ರೂಪದಲ್ಲಿ ತಂದ ಹಣ ತುಂಬಿದ್ದಾರೆ. ಇತ್ತ ಹಣನೂ ಇಲ್ಲಾ, ಅತ್ತ ಮನೆಯೂ ಇಲ್ಲದ ಸ್ಥಿತಿ ನಿಮಾಣವಾಗಿದೆ. ಕೋವೀಡ್ ಹೊಡೆತಕ್ಕೆ ತ್ತರಿಸಿದ ಬಡವರ ಬಡ್ಡಿ ಕಟ್ಟಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಹಿಗಾಗಿ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಕೈಕೊಳ್ಳುವದು ಅನಿವಾರ್ಯವಾಗಿದೆ. ಹೋರಾಟ ಯಾವ ವ್ಯಕ್ತಿಯ ವಿರುದ್ದ, ಯಾವುದೇ ವ್ಯಕ್ತಿಯನ್ನು ತೇಜೋವಧೆ ಮಾಡುವ ಉದ್ದೇಶ ಹೊಂದಿರುವದಿಲ್ಲ. ಪಟ್ಟಣದ ಅಭಿವೃದ್ದಿಗೋಸ್ಕರ ನಡೆಯುತ್ತಿರ ಹೋರಾಟ ಇದಾಗಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹೋರಾಟಗಾರರು, ಸಾರ್ವಜನಿಕರು ಕೈಜೋಡಿಸಬೇಕು ಎಂದರು. 

ಈ ಸಂದರ್ಭದಲ್ಲಿ ಸುರೇಶಕುಮಾರ ಹಜೇರಿ,  ನದೀಂ ಕಡು, ಪತ್ತೇಅಹ್ಮದ ನಾಯ್ಕೋಡಿ,  ಸುರೇಶ ಹಜೇರಿ, ರವಿ ಕಟ್ಟಿಮನಿ, ಶಿವರಾಜ ಗುಂಡಕನಾಳ, ಸುಭಾಸ ಗೌಡಗೇರಿ, ನಿಂಗನಗೌಡ ದೇಸಾಯಿ, ರಮೇಶ ಮೋಹಿತೆ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ