ಬಳ್ಳಾರಿ

ಕೋಲ್ಕತ್ತಾ: ಪ್ರತಿಭಟನಾಕಾರರ ಬಂಧನ ಖಂಡಿಸಿ ಪ್ರತಿಭಟನೆ

ಕೋಲ್ಕತ್ತಾ: ಪ್ರತಿಭಟನಾಕಾರರ ಬಂಧನ ಖಂಡಿಸಿ ಪ್ರತಿಭಟನೆ

ಬಳ್ಳಾರಿ 21: ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು. 2019ರಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅಂತಿಮವಾಗಿ 8413 ಯುವಕರನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಹಂತದಲ್ಲಿ, 1871 ಯುವಕರಿಗೆ ನೇಮಕಾತಿ ಆದೇಶ ನೀಡಲಾಯಿತು. ಆದರೆ ನಂತರ ಕೋಲ್ಕತಾ ಹೈಕೋರ್ಟ್‌ ಅಲ್ಪಾವಧಿಗೆ ತಡೆಯಾಜ್ಞೆ ನೀಡಿತ್ತು. ಈಗ ನ್ಯಾಯಾಲಯವು ತಡೆಯಾಜ್ಞೆ ಆದೇಶವನ್ನು ಹಿಂತೆಗೆದುಕೊಂಡ ನಂತರವೂ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿಲ್ಲ. ಈ ಬೇಡಿಕೆಯ ಮೇರೆಗೆ, ಬಂಗಾಳ ಪೊಲೀಸರ ಪ್ರಧಾನ ಕಚೇರಿಯಾದ ಭವಾನಿ ಭವನದಲ್ಲಿ ನೂರಾರು ಯುವಕರು ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರ ನ್ಯಾಯಸಮ್ಮತ ಬೇಡಿಕೆಗಳನ್ನು ಆಲಿಸುವ ಬದಲು, ಬಂಗಾಳ ಪೊಲೀಸರು ಅಮಾನವೀಯವಾಗಿ ಅವರ ಮೇಲೆ ಲಾಠಿ ಚಾರ್ಜ್‌ ಮಾಡಿದರು. ಇದರ ವಿರುದ್ಧ, ಇಂದು ಹಜ್ರಾದಲ್ಲಿ ನಿರುದ್ಯೋಗಿ ಯುವಜನ ಹೋರಾಟ ಸಮಿತಿ, ಕೋಲ್ಕತಾ ಘಟಕವು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನಾ ಸ್ಥಳವನ್ನು ತಲುಪುವ ಮೊದಲೇ ಕೊಲ್ಕತಾ ಪೊಲೀಸರು ಪ್ರತಿಭಟನಾಕಾರರನ್ನು ಥಳಿಸಿ ಬಂಧಿಸಿದ್ದಾರೆ . ಬಂಧಿತ ಯುವಕರಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಖಜಾಂಚಿ ಸುಕನ್ ಮತ್ತು ಸಹಾಯಕ ಕಾರ್ಯದರ್ಶಿ ಸಂಜಯ್ ಬಿಸ್ವಾಸ್ ಸೇರಿದ್ದಾರೆ. ಈ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತಾ ಈ ಕೆಳಗಿನ ಹಕ್ಕೊತ್ತಾಯಗಳಿಗಾಗಿ ಆಗ್ರಹಿಸುತ್ತೇವೆ. 


ಸುದ್ದಿ ಓದಿ