ನ್ಯಾಯವಾದಿಗಳ ಮೇಲೆ ಹಲ್ಲೆ, ಕೊಲೆ ಖಂಡಿಸಿ ಪ್ರತಿಭಟನೆ
ಹುನಗುಂದ 02: ವಿಜಯನಗರ (ಹೊಸಪೇಟೆ) ನ್ಯಾಯಾಲಯ ಆವರಣದಲ್ಲಿ ಹಿರಿಯ ವಕೀಲ ತಾರಿಹಳ್ಳಿ ವೆಂಕಟೇಶ ಅವರ ಹತ್ಯೆ ಹಾಗೂ ತೆಲಂಗಾಣದಲ್ಲಿ ಇತ್ತೀಚೆಗೆ ವಕೀಲ ದಂಪತಿಯ ಕೊಲೆ ಪ್ರಕರಣ ಸೇರದಂತೆ, ಅಲ್ಲಲ್ಲಿ ನ್ಯಾಯವಾದಿಗಳ ಮೇಲೆ ಕೊಲೆ ಹಲ್ಲೆಗಳಂತ ಘಟನೆಗಳ ವಿರುದ್ಧ ತಾಲೂಕಾ ವಕೀಲರ ಸಂಘ ಪ್ರತಿಭಟಿಸಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ವಕೀಲರ ಸಂಘದ ಅಧ್ಯಕ್ಷ ಮಾಧವರಾವ್ ದೇಶಪಾಂಡೆ ನಧತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ನ್ಯಾಯಾಲಯದಿಂದ ಚನ್ನಮ್ಮ ವೃತ್ತ, ವಿಮ ವೃತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತ ಮಾರ್ಗವಾಗಿ ತಾಲೂಕಾ ಆಡಳಿತ ಮಿನಿ ವಿಧಾನಸೌಧದ ಮುಂದೆ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಡೆದಂತ ದುರ್ಘಟನೆ ವಿರುದ್ದ ದಿಕ್ಕಾರದ ಗೋಷಣೆಗಳನ್ನು ಕೂಗುತ್ತಾ ಮಾತನಾಡಿದ ಅವರು ನ್ಯಾಯಕ್ಕಾಗಿ ಬಡಿದಾಡಿ ಜೀವನದುದ್ದಕ್ಕೂ ನೆಮ್ಮದಿ ಕಳೆದುಕೊಳ್ಳುವ ಕಕ್ಷಿದಾರರ ಪರವಾಗಿ ವಾದ ಮಾಡುವುದು ವಕೀಲರ ಕೆಲಸ. ಅಂತಹ ಕೆಲಸದಲ್ಲೂ ವಕೀಲರಿಗೆ ಈಗ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ವಕೀಲರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಪೋಲೀಸ್ ಬಲವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ದೇಶಪಾಂಡೆ ಆಗ್ರಹಿಸಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಎಮ್. ಎನ್. ಭಮಸಾಗರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗೌಡರ, ಸಹ ಕಾರ್ಯದರ್ಶಿ ಬಿ.ಭಾರತಿ, ಎಸ್.ಆರ್.ಐಹೋಳ್ಳಿ, ವಕೀಲರಾದ ಬಿ.ಎ.ಆವಟಿ, ಎಮ್.ಎಸ್.ಪಾಟೀಲ, ಟಿ.ಎಂ.ಚಲವಾದಿ, ಆರ್.ಎಂ.ಕಳ್ಳಿಮಠ, ಎಸ್.ಜಿ.ರಾಂಪೂರ, ಎಂ.ಜಿ.ಮಡಿಕಾರ, ಎಂ.ಬಿ.ಭದ್ರಣ್ಣವರ, ವಿಶ್ವನಾಥ ಕಪನೂರ, ಸಂಗು ಸಾರಂಗಮಠ, ವಿ.ಎಸ್.ಬಂಡಿ, ಸೇರಿದಂತೆ ಅನೇಕರು ಇದ್ದರು.