ಪಟಾಕಿ ವ್ಯಾಪಾರಸ್ಥರಿಂದ ಪ್ರತಿಭಟನೆ
ಇಂಡಿ: ಪಟಾಕಿ ವ್ಯಾಪಾರ ಮಾಡಲು ಅನುವು ಮಾಡಿ ಕೊಡಬೇಕೆಂದು ಪಟ್ಟಣದಲ್ಲಿ ಬುಧವಾರ ಪಟಾಕ ವ್ಯಾಪಾರಸ್ಥರು ಧಿಡೀರನೆ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾರರನ್ನುದ್ದೇಶಿಸಿ ವ್ಯಾಪಾರಸ್ಥರಾದ ಅವಿನಾಶ ಬಗಲಿ, ಯಮನಾಜಿ ಸಾಳುಂಕೆ, ಸಂಜು ದಶವಂತ ಮತ್ತಿತರರು ಮಾತನಾಡಿ, ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟಗಾರರಿಂದ ಪಟಾಕಿ ಖರೀದಿ ಮಾಡಿದ್ದೇವೆ. ಆದ್ರೆ, ಇದೀಗ ಇಂಡಿ ಪೊಲೀಸರು ಮಾರಾಟಕ್ಕೆ ಕಡಿವಾಣ ಹಾಕಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಟಾಕಿ ತರಿಸಿದ್ದೇವೆ ಪಟಾಕಿ ಮಾರಾಟ ಮಾಡದಿದ್ದರೆ ನಮ್ಮ ಎಲ್ಲ ಹಣ ನೀರುಪಾಲಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜು ರಾಠೋಡ, ರಾಜಗುರು ದೇವರ ಮಾತನಾಡಿ ಹಿಂದೂಗಳ ಹಬ್ಬಗಳು ನಡೆದ ಸಂದರ್ಭದಲ್ಲಿ ಮಾತ್ರ ಎಲ್ಲ ನಿಯಮಗಳು ಹೊರಬರುತ್ತವೆ ಏಕೆ? ಎಲ್ಲರಿಗೂ ಒಂದೇ ನಿಯಮ ಮಾಡುವುದನ್ನು ಬಿಟ್ಟು, ಹಿಂದೂಗಳ ಹಬ್ಬಗಳಿಗೆ ಏಕೆ ನಿಯಮ ಜಾರಿ ಮಾಡುತ್ತೀರಿ,, ಪೊಲೀಸರು ಹಿಂದೂ ವಿರೋಧಿಗಳಾಗಿದ್ದಾರೆ ಎನ್ನುತ್ತಿದ್ದಂತೆ ಸೇರಿದ ನೂರಾರು ಜನ ಹಿಂದೂ ವಿರೋಧಿ ಪೊಲೀಸ್ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ಪ್ರಸಂಗ ನಡೆಯಿತು.
ಸ್ಥಳಕ್ಕೆ ಡಿ.ವಾಯ್.ಎಸ್.ಪಿ. ಶ್ರೀಧರ ದೊಡ್ಡಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಸಲು ಪ್ರಯ್ನಸಿದರು. ಆದ್ರೇ ಕೆಲವು ಸಮಯದವರೆಗೂ ಪ್ರತಿಭಟನಾಕಾರರು ಹಾಗೂ ಡಿವೈಎಸ್‌ಪಿ ಅವರ ನಡುವೆ ಮಾತಿನ ವಾಗ್ವಾದ ನಡೆಯಿತು. ಕೊನೆಗೆ ದೊಡ್ಡಿಯವರ ಮಾತಿನಂತೆ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಜಪ್ತಿ ಮಾಡಿದ ಪಟಾಕಿಗಳನ್ನು ಮರಳಿ ವ್ಯಾಪಾರಸ್ಥರಿಗೆ ಕೊಡಿಸಿ ಡಿವೈಎಸ್‌ಪಿ ದೊಡ್ಡಿ ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟರು.
ಬಾಕ್ಸ
ತಪ್ಪಾಯಿತು ಏಳ್ರೀ ಎಂದ ಡಿವೈಎಸ್‌ಪಿ:
ಪಟಾಕಿ ವ್ಯಾಪಾರಸ್ಥರು ಬೆಳಿಗ್ಗೆಯೇ ಡಿವೈಎಸ್‌ಪಿ ಅವರನ್ನು ಭೇಟಿ ಮಾಡಿ ಪಟಾಕಿ ಮಾರಾಟ ಮಾಡಲು ಅನುವು ಮಾಡಿಕೊಡಿ ಎಂದು ಕೆಳಿದ್ದರು ಆಗ ಡಿವೈಎಸ್ ಪಿ ಅವರು ಆಯಿತು ಮಾರಾಟ ಮಾಡಿ ಎಂದು ಹೇಳಿದ್ದರು. ಕೆಲ ಸಮಯದ ನಂತರ ಇಂಡಿ ನಗರ ಠಾಣಾಧಿಕಾರಿ ಭೀಮನಗೌಡ ಬಿರಾದಾರ ಪಟಾಕಿ ಅಂಗಡಿಗಳಿಗೆ ಹೋಗಿ ಅಲ್ಲಿನ ಪಟಾಕಿಗಳನ್ನೆಲ್ಲ ಜಪ್ತಿ ಮಾಡಿಕೊಂಡರು, ಹೀಗಾಗಿ ವ್ಯಾಪಾರಸ್ಥು ರೊಚ್ಚಿಗೆದ್ದು ಬಸವೇಶ್ವರ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಟ್ರಾಫಿಕ್ ಜಾಮ್ ಆಗಿ ಅರ್ಧ ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಡಿವೈಎಸ್‌ಪಿ ಶ್ರೀಧರ ದೊಡ್ಡಿ ಅವರ ಮಾತನ್ನು ವ್ಯಾಪಾರಸ್ಥರು ಕೇಳದಿದ್ದಾಗ ನಮ್ಮಿಂದ ತಪ್ಪಾಗಿದೆ ಏಳ್ರೀ ನಮ್ಮ ಕಚೇರಿಗೆ ಬನ್ನಿ,,, ಸರಿಪಡಿಸುತ್ತೇವೆ ಎಂದು ಪ್ರತಿಭಟನಾಕಾರರಿಗೆ ವಿನಂತಿಸಿದಾಗ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು.
ಈ ಸಂದರ್ಭದಲ್ಲಿ ಅನೀಲಗೌಡ ಬಿರಾದಾರ, ಪ್ರದೀಪ ಉಟಗಿ, ಸತೀಶ ಕುಂಬಾರ, ಅನೀಲ ದೇವರ, ರಾಮಸಿಂಗ ಕನ್ನೊಳ್ಳಿ, ಶಿವುಕುಮಾರ ಬಿಸನಾಳ, ನಾಗು ದಶವಂತ, ಭೀಮಾಶಂಕರ ಆಳೂರ, ಶಂಕರ ಹಲವಾಯಿ, ಸ್ವಾಗತ ಶಹಾ, ಕಂಠೆಪ್ಪ ಚವ್ಹಾಣ, ಸೋಮು ನಾಗಣ್ಣನವರ, ಸರ್ವೇಶ ಶಹಾ, ಸಂಕೇತ ಶಹಾ, ಪ್ರಸಾದ ಏಳಗಿ, ಶಿವಾನಂದ ಕೊಪ್ಪ, ಚಿಟ್ಟು ಧನಶೆಟ್ಟಿ, ಗುರು ಹೂಗಾರ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.