ಬಳ್ಳಾರಿ

ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಸಿರುಗುಪ್ಪ 16: ಸರ್ಕಾರ ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆ ಯನ್ನು ಖಂಡಿಸಿ ಸಿರುಗುಪ್ಪ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಬಿ ಎಂ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟಿಸಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಸ್ ಬಿ ಕೂಡಲಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು ಸರ್ಕಾರ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿರುಗುಪ್ಪ ಎನ್ ಕರಿಬಸಪ್ಪ ತೆಕ್ಕಲಕೋಟೆ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಗೌಡ ನಗರ ಸಭೆ ಅಧ್ಯಕ್ಷ ಡಿ ನಾಗರಾಜ್ ಮುಖಂಡರಾದ ಟಿ ಎಂ ಸಿದ್ಧರಾಮಯ್ಯ ಸ್ವಾಮಿ ಗಜಿಗಿನಹಾಳು ವಿರುಪಾಕ್ಷಗೌಡ ತೆಕ್ಕಲಕೋಟೆ ಮಲ್ಲಿಕಾರ್ಜುನ ಮಹೇಶ್ ಗೌಡ ಮಲ್ಲಿಕಾರ್ಜುನ ಚಿದಾನಂದ ರಾಯುಡು ಬಂದೇ ನವಾಜ್ ಮುಲ್ಲಾ  ಅಬ್ದುಲ್ ರವೂಫ್ ಭೀಮಪ್ಪ ಕೋಟಿರೆಡ್ಡಿ ಶ್ರೀನಿವಾಸ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಇದ್ದರು

ಸುದ್ದಿ ಓದಿ