ಗ್ರಾಕೂಸ್ ಸಂಘಟನೆಯಿಂದ ಪ್ರತಿಭಟನೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 03: ಪಟ್ಟಣದ ತಾಲೂಕು ಪಂಚಾಯತ್ ಅವರಣದ ಮುಂದೆ ಗ್ರಾಕೂಸ್ ಸಂಘಟನೆಯು ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಈ ವೇಳೆ ತಾಲೂಕು ಗ್ರಾಕೂಸ್ ಪ್ರತಿನಿಧಿ ಬಿ.ಟಿ.ಹನುಮಂತಪ್ಪ ತಾಲೂಕಿನ ಗ್ರಾಪಂ ಪಿಡಿಒಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಸೊನ್ನ ಗ್ರಾಪಂನಲ್ಲಿ ಜೂನ್ ತಿಂಗಳಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಈವರೆಗೂ ಕೂಲಿ ಮೊತ್ತ ಪಾವತಿಸಿಲ್ಲ. ತಾಲೂಕಿನ ಹಂಪಾಪಟ್ಟಣ, ಮರಬ್ಬಿಹಾಳು, ಬೆಣ್ಣಿಕಲ್ಲು, ಹನಸಿ ಇತರೆ ಗ್ರಾಮಗಳಲ್ಲಿ ನಿರಂತರವಾಗಿ ಖಾತ್ರಿ ಯೋಜನೆಯಡಿ ಕೆಲಸ ನೀಡಲ್ಲ. ಸಾಮಾಜಿಕ ಹಾಗೂ ವಲಯ ಅರಣ್ಯ ಅಧಿಕಾರಿಗೆ ಕೆಲಸ ನೀಡುವಂತೆ ಅರ್ಜಿಕೊಟ್ಟರೂ ಈವರೆಗೂ ಇಲಾಖೆಯವರು ಸ್ಪಂದಿಸಿಲ್ಲ. ಏಪ್ರಿಲ್ ತಿಂಗಳಿಂದಲೂ ತಾಲುಕಿನ ಎಲ್ಲಾ ಪಿಡಿಒಗಳು ಕಾರ್ಮಿಕರಿಗೆ ಜಾಬ್ ಕಾರ್ಡ್ಗಳನ್ನು ಬೇರಿ್ಡಸಿ ಕೊಡದೆ ಇದ್ದಿದ್ದರಿಂದ, ಸಾವಿರಾರು ಕುಟುಂಬಗಳು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಉಳಿಯುವಂತಾಗಿದೆ. ಜಾಬ್ ಕಾರ್ಡ್ಗಳನ್ನು ಸರಿಪಡಿಸಿ ಕೊಡದ ಪಿಡಿಒಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮುತ್ಕೂರು ಗ್ರಾಪಂಯಲ್ಲಿ ಎನ್ಎಂಆರ್ಗಳನ್ನು ಜಿರೋ ಮಾಡಿರುವ ಪಿಡಿಒ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಜಿಲ್ಲಾ ಸಂಚಾಲಕ ಕೋಗಳಿ ಮಲ್ಲೇಶ್, ಸಂಚಾಲಕರಾದ ಅಕ್ಕಮಹಾದೇವಿ, ಕೊಟ್ರಮ್ಮ, ಶಿಲ್ಪಾ, ಗಂಗಮ್ಮ, ಯಶೊಧ, ಬಸವರಾಜ, ಪರುಶುರಾಮ, ಶರಣಪ್ಪ, ಕನಕಮ್ಮ, ಮಂಜಮ್ಮ, ದುರುಗಪ್ಪ, ಜ್ಯೋತಿ, ಶ್ರೀದೇವಿ, ಅನ್ನಪೂರ್ಣ, ಅಂಜಿನಪ್ಪ, ನಾಗಮ್ಮ, ಪುಷ್ಪಾವತಿ, ಶೇಖರ್ಪ ಇತರರಿದ್ದರು. ತಾ.ಪಂ.ಇಒ ಪರಮೇಶ್ವರ್ಪ ಮನವಿ ಸಲ್ಲಿಸಿದರು.