ಹಗರಿಬೊಮ್ಮನಹಳ್ಳಿ

ರಾಜ್ಯ, ಕೇಂದ್ರ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ; ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಮೀಟರ್ ಕಿತ್ತು ಟಿಬಿ ಡ್ಯಾಂಗೆ ಹಾಕುವೆವು : ಗೋಣಿಬಸಪ್ಪ

ರಾಜ್ಯ, ಕೇಂದ್ರ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ; ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಮೀಟರ್ ಕಿತ್ತು ಟಿಬಿ ಡ್ಯಾಂಗೆ ಹಾಕುವೆವು : ಗೋಣಿಬಸಪ್ಪ

ಲೋಕದರ್ಶನ ವರದಿ 


ಹಗರಿಬೊಮ್ಮನಹಳ್ಳಿ.ಮಾ.30: ದೇಶದ ಬೆನ್ನೆಲುಬಾದ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಾ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘವು ಪ್ರತಿಭಟಿಸಿ ಜೆಸ್ಕಾಂ ಎಇಇ ತೇಜನಾಯ್ಕ ಮೂಲಕ, ವ್ಯವಸ್ಥಾಪಕ ನಿರ್ದೇಶಕರು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯವರಿಗೆ ಮನವಿ ಸಲ್ಲಿಸಿದರು. 

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ ಮೀಟರ್‌ಗಳನ್ನು ಕಿತ್ತು ಟಿಬಿ ಡ್ಯಾಂಗೆ ಹಾಕುವೆವೆ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಾಗಿ ತಾಲೂಕಿನಲ್ಲಿ ಪಂಪ್‌ಸೆಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಉತ್ತಮ ವೋಲ್ಟೇಜ್ ಹೊಂದಿರುವ ನಿರಂತರ ಹತ್ತು ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಈಗ ನೀಡುತ್ತಿರುವ 7ತಾಸು ವಿದ್ಯುತ್ ಬೆಳೆಗಳಿಗೆ ಸಾಲುತ್ತಿಲ್ಲ, ಬಿಸಿಲಿನ  ತಾಪ ಹೆಚ್ಚಾಗಿರುವುದರಿಂದ ನೀರಿನ ಕೊರತೆಯುಂಟಾಗುತ್ತಿದೆ. ತಾಲೂಕಿನಲ್ಲಿ ಶೀಘ್ರ ಸಂಪರ್ಕ ಯೋಜನೆ, ಇಂಪ್ರ್ಯೂಮೆಂಟ್ ವರ್ಕ್‌, ಎನಾನ್ಸ್‌ಮೆಂಟ್ ವರ್ಕ್‌, ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ವಿದ್ಯುತ್ ಪರಿವರ್ತಕ, ಕಂಬ, ತಂತಿಯನ್ನು ಕೂಡಲೇ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಅಧಿಕಾರಿಗಳು ಜೇಷ್ಠತೆಯನ್ನು ಪಾಲಿಸುತ್ತಿಲ್ಲ, ಹಣವಂತರಿಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸಂಪರ್ಕ ನೀಡಲಾಗುತ್ತಿದೆ. ಇಂತಹ ತಾರತಮ್ಯ ನೀತಿಗಳನ್ನು ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಒತ್ತಾಯಿಸಿದರು. 

ರೈತ ಮುಖಂಡ ವಿ.ನಾಗೇಂದ್ರ​‍್ಪ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ನೀತಿಯನ್ನು ಸರಕಾರ ಹಿಂತೆಗೆದುಕೊಳ್ಳಬೇಕು. ಬಹುತೇಖ ಕಡೆಗಳಲ್ಲಿ ವಿದ್ಯುತ್ ಲೈನ್‌ಗಳು ಜೋತುಬಿದ್ದಿದ್ದು ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು. ಜಂಗಲ್ ಕಟ್ಟಿಂಗ್‌ನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ರೈತರ ಸುಟ್ಟುಹೋದ ಪರಿವರ್ತಕಗಳನ್ನು ಸರಿಪಡಿಸಿ ಕೂಡಲೇ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. 

ರೈತ ಸಂಘದ ಅಧ್ಯಕ್ಷ ಹರಟೆ ಕಾಳಪ್ಪ, ಪದಾಧಿಕಾರಿಗಳಾದ ನಾಗಲಾಪುರ ವೀರಣ್ಣ, ಏಣಿಗಿ ಮಾಬುಸಾಬ್, ಹೆಚ್‌.ಶೇಖರ​‍್ಪ, ಕೆ.ಶಿವಣ್ಣ, ಹೆಚ್‌.ಮಹೇಶ್, ಜಿ.ಶಿವಕುಮಾರ, ಕೆಕೆಬಿಎಂ ಗುರುವಯ್ಯ, ಹೆಚ್‌.ನಾಗರಾಜ, ಆರ್‌.ಬಿ.ಶಾಂತಕುಮಾರ, ಮುದುಕಪ್ಪ ಇತರರಿದ್ದರು. 


ಸುದ್ದಿ ಓದಿ