ಬಳ್ಳಾರಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ  ಪ್ರತಿಭಟನೆ


ಲೋಕದರ್ಶನ ವರದಿ 

ಬಳ್ಳಾರಿ 18: ಆಮ್ ಆದ್ಮಿ ಪಕ್ಷ, ಜಿಲ್ಲಾ ಘಟಕ ಬಳ್ಳಾರಿ ವತಿಯಿಂದ ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ದೈನಂದಿನ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮದ್ಯಮ ವರ್ಗದ ಜನರಿಗೆ ಜೀವನ ನಡೆಸುವುದು ಅತ್ಯಂತ ದುಸ್ಥರವಾಗಿದೆ. ಡೀಸೆಲ್ ಮತ್ತು ಪೆಟ್ರೊಲ್ ಬೆಲೆ ಏರಿಕೆಯಿಂದ ಪರೋಕ್ಷವಾಗಿ ಅಂದರೆ ಸರಕು ಸಾಗಾಟ ತುಟ್ಟಿಯಾಗಿ ದಿನಬಳಕೆಯ ವಸ್ತುಗಳ ಬೆಲೆಗಳ ಮೇಲೆ ದುಷ್ಪರಣಾಮ ಬೀರಿದೆ. ಇದರಿಂದ ಸಹಜವಾಗಿ ಅಗತ್ಯವಸ್ತುಗಳ ಬೆಲೆ ಕೂಡ ಗಗನಮುಖಿಯಾಗಿ ಏರಿಕೆ ಕಂಡು ಬಡಜನರ ಕೊಳ್ಳುವ ಶಕ್ತಿ ಇಳಿಮುಖವಾಗಿ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ.  


ಈ ರೀತಿಯ ಅಗತ್ಯ ವಸ್ತುಗಳ ಬೆಲೆ ಸತತ ಏರಿಕೆಯನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ರಾಜ್ಯದ ಪಾಲಿನ ತೆರಿಗೆಯನ್ನು ಕಡಿತಗೊಳಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಒತ್ತಾಯಪಡಿಸುತ್ತಿದ್ದೇವೆ.    

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ವಿ ಬಿ ಮಲ್ಲಪ್ಪ, ಕಾರ್ಯದರ್ಶಿ ಸೈಯಾದ್ ಪಟೆಲ್, ಯುವಘಟಕದ ಖಲಂದರ್, ಗ್ರಾಮಿಣ ಘಟಕದ ಕಿರಣ್‌ಕುಮಾರ್,ಭರತ್‌ಕುಮಾರ್, ನಿತಿನ್, ಮಲ್ಲಯ್ಯ ಕೊಳಗಲ್ಲು, ಮಲ್ಲಯ್ಯ ವಿ ಬಿ, ನೆಟ್ಟಿಕಂಟಿ ಸೇರಿದಂತೆ ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ