ತಾಳಿಕೋಟಿ

ಶಾಸಕ ಯತ್ನಾಳ, ಮಾಜಿ ಶಾಸಕ ಕಾಶಪ್ಪನವರ ವಿರುದ್ಧ ಪ್ರತಿಭಟನೆ ; ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪ ಪ್ರತಿಕೃತಿ ದಹಿಸಿ ಆಕ್ರೋಶ:

ಶಾಸಕ ಯತ್ನಾಳ, ಮಾಜಿ ಶಾಸಕ ಕಾಶಪ್ಪನವರ ವಿರುದ್ಧ ಪ್ರತಿಭಟನೆ ; ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪ ಪ್ರತಿಕೃತಿ ದಹಿಸಿ ಆಕ್ರೋಶ:


ತಾಳಿಕೋಟಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಹುಕ್ಕೇರಿ ಸಮಾವೇಶದಲ್ಲಿ ಬಣಜಿಗ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವದನ್ನು ಖಂಡಿಸಿ ಬಣಜಿಗ ಸಮಾಜದವರು ಸೋಮವಾರ ಪಟ್ಟಣದಲ್ಲಿ ಇಬ್ಬರು ನಾಯಕರ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. 

ಈ ಸಮಯದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಂಗಾಧರ ಕಸ್ತೂರಿ ವಕೀಲರು ಮಾತನಾಡಿ ಹುಕ್ಕೇರಿ ಸಮಾವೇಶದಲ್ಲಿ ಶಾಸಕ ಯತ್ನಾಳ ಹಾಗೂ ಮಾಜಿ ಶಾಸಕ ಕಾಶಪ್ಪನವರ ಅವರು ನಮ್ಮ ಸಮಾಜ ಹಾಗೂ ಕುಲಗೋತ್ರವನ್ನು ಹೀಯಾಳಿಸಿ ಮಾತನಾಡಿರುವದನ್ನು ನಾವು ಅತ್ಯುಗ್ರವಾಗಿ ಖಂಡಿಸುತ್ತೇವೆ. 2ಎ ಮೀಸಲಾತಿ ಪಡೆಯುವದು ಅವರ ಸಮಾಜದ ಸಂವಿಧಾನಬದ್ಧ ಹಕ್ಕಾಗಿದೆ ಅದಕ್ಕೆ ನಮ್ಮ ಯಾವ ವಿರೋಧವು ಇಲ್ಲ. ನಾವೂ ಸಹ ಇದನ್ನು ಬೆಂಬಲಿಸುತ್ತೇವೆ. ಆದರೆ ವಿನಾಕಾರಣ ನಮ್ಮ ಸಮಾಜವನ್ನು ಗುರಿಯಾಗಿರಿಸಿ ಅವಹೇಳನಕಾರಿಯಾಗಿ ಮಾತನಾಡುವದು ಶೋಭೆ ತರುವ ವಿಷಯ ಅಲ್ಲ. ಈ ಇಬ್ಬರು ನಾಯಕರ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಸಮಾಜದ ಕೊಡುಗೆ ಅಪಾರ ಇದೆ. ಇವರು ತಮ್ಮನ್ನು ಸುಧಾರಿಸಿಕೊಳ್ಳದೆ ಹೋದಲ್ಲಿ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ. ಇವರು ಬಹಿರಂಗವಾಗಿ ಕ್ಷಮೆ ಯಾಚಿಸದೆ ಹೋದಲ್ಲಿ, ಇನ್ನಷ್ಟು ಉಗ್ರವಾದ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎಂದರು.  

ಬಣಜಿಗ ಸಮಾಜ ಬಾಂಧವರು ಶ್ರೀ ಅಂಬಾಭವಾನಿ ಮಂದಿರದಲ್ಲಿ ಮಹಾಪೂಜೆ ಸಲ್ಲಿಸಿ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಯತ್ನಾಳ ಹಾಗೂ ಕಾಶಪ್ಪನವರ ಅವರ ಪ್ರತಿಕೃತಿ ಹಿಡಿದು ಹಲಗೆ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಬಸವೇಶ್ವರ ವೃತ್ತದಲ್ಲಿ ಪ್ರತಿಕೃತಿ ದಹಿಸಿ ನಂತರ ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ನಗರ ಘಟಕ ಅಧ್ಯಕ್ಷ ಈರ​‍್ಪ ಕಲಬುರ್ಗಿ, ತಾಲೂಕಾ ಅಧ್ಯಕ್ಷ ಸುಭಾಷ ಸಾಲಂಕಿ, ಖಜಾಂಚಿ ರಮೇಶ ಸಾಲಂಕಿ, ಕಲಕೇರಿ ಘಟಕ ಅಧ್ಯಕ್ಷ ದೇವೇಂದ್ರ ಕಡಕೋಳ, ಸುಧಾಕರ ಅಡಕಿ, ಎಮ್‌.ಎಸ್‌. ಸರಶೆಟ್ಟಿ, ಅಶೋಕ ಬಳಗಾನೂರ, ಚನ್ನಮಲ್ಲಪ್ಪ ಕತ್ತಿ, ಸಿ.ಎಸ್‌. ಬಳಗಾನೂರ, ಸುಧೀರ ಅಡಕಿ (ಸಿಂದಗಿ), ಮಹಾಂತೇಶ ಬ್ಯಾಕೋಡ (ಹೂ.ಹಿಪ್ಪರಗಿ), ಬ.ಬಾಗೇವಾಡಿ ಅಧ್ಯಕ್ಷ ಮುತ್ತು ಕಿಣಗಿ, ಮುದ್ದೇಬಿಹಾಳ ನಗರ ಅಧ್ಯಕ್ಷ ಬಾಲಚಂದ್ರ ಗದಗಿನ, ಪ್ರಧಾನ ಕಾರ್ಯದರ್ಶಿ ಆರ್‌.ಜಿ. ಹಳ್ಳಗಿ, ಶಶಿಧರ ಹೆಗ್ಗಣದೊಡ್ಡಿ (ಬಿಂಜಲಬಾವಿ), ಗುರುಸಂಗಪ್ಪ ಜಂಬಲದಿನ್ನಿ, ಯುವ ಘಟಕ ಅಧ್ಯಕ್ಷ ಪ್ರಭು ಕತ್ತಿ, ಮಹೇಶ ದೇವಶೆಟ್ಟಿ, ಅಣ್ಣಪ್ಪ ವಾಲಿ ಇದ್ದರು. 


ಸುದ್ದಿ ಓದಿ