ಮುಂದಗೋಡ

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ದ ಪ್ರತಿಭಟನೆ

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ  ವಿರುದ್ದ ಪ್ರತಿಭಟನೆ


ಮುಂಡಗೋಡ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರ ತೆಗೆಸಿದ ರಾಯಚೂರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿವಿಧ ದಲಿತ ಸಂಘಟನೆ ಮುಖಂಡರು ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರ ಬಳಿ ಪತ್ರಿಕಾಗೋಷ್ಟಿ ನಡೆಸಿ ಈ ವಿಷಯ ತಿಳಿಸಿದ ಅವರು, ಗಣರಾಜಕ್ಯೋತ್ಸವದ  ಸಂದರ್ಭದಲ್ಲಿ ಅಂಬೇಡ್ಕರ ಅವರ ಭಾವಚಿತ್ರ ತೆಗೆಸಿ ಅವಮಾನಿಸಿದ್ದಾರೆ. ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮಲ್ಲಿಕಾರ್ಜು ಗೌಡ ಅವರ ಮೇಲೆ ಸೊಮೋಟೊ  ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸ ಸೋಮವಾರ ಬೆಳಿಗ್ಗೆ ಪಟ್ಟಣದ ಅಂಬೇಡ್ಕರ್ ಪುತ್ತಳಿಗೆ ಮಾಲಾರೆ​‍್ಣ ಮಾಡಿ ಬಳಿಕ ಶಿವಾಜಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು. 

ದಲಿತ ಮುಖಂಡ ಎಸ್‌.ಫಕ್ಕೀರ​‍್ಪ, ಅಶೋಕ ಚಲವಾದಿ, ಬಸವರಾಜ ಸಂಗಮೆಶ್ವರ, ಹನ್ಮಂತಪ್ಪ ಬಜಂತ್ರಿ, ದುರ್ಗಪ್ಪ ಬಂಡಿವಡ್ಡರ, ಶರೀಪ್ ಮುಗಳಿಕಟ್ಟಿ, ಅಯ್ಯಪ್ಪ ಭಜಂತ್ರಿ, ತಿಪ್ಪಣ್ಣ ಭೋವಿ, ರಾಘವೇಂದ್ರ ಮಳಗಿಕರ, ಹನ್ಮಂತಪ್ಪ ಆರೇಗೊಪ್ಪ, ಹುಲಗಪ್ಪ ಭೋವಿ ವಡ್ಡರ, ಸುರೇಶ ಚಲವಾದಿ, ವಾಸು ದಾವಣಗೇರಿ, ಬಸವರಾಜ ಕಳಸಾಪುರ, ದ್ಯಾಮಣ್ಣ ಮಡ್ಲಿ ರಾಘವೇಂದ್ರ ಟಪಾಲದವರ, ಪರಶುರಾಮ ಹರಿಜನ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ