ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಪ್ರತಿಭಟನೆ, ಮನವಿ
ಬೈಲಹೊಂಗಲ 09: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತು ಖಂಡನಾರ್ಹ ಹೇಳಿಕೆ ನೀಡುತ್ತಿದ್ದು. ಬಹುಸಂಖ್ಯಾತ ಹಿಂದೂಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಪದೇ ಪದೇ ಧಕ್ಕೇ ತರುವ ಹೇಳಿಕೆ ನೀಡುತ್ತಿದ್ದು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯನ್ನು ಖಂಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಅಮ್ಮಿನಬಾವಿ, ಜಿಲ್ಲಾ ಯುವಮೋರ್ಚಾ ಕೋಶಾಧ್ಯಕ್ಷ ಸಚಿನ ಕಡಿ, ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಗೌಡಪ್ಪ ಹೊಸಮನಿ, ಆತ್ಮಾನಂದ ಅಬ್ಬಾಯಿ , ಕಾರ್ಯದರ್ಶಿ ನಾಗಪ್ಪ ಸಂಗೋಳ್ಳಿ, ಪುರಸಭೆ ಸದಸ್ಯರಾದ ಸಾಗರ ಬಾವಿಮನಿ. ಮಂಡಲ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಸದಾಸಿವಗೌಡ ಪಾಟೀಲ,ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ , ಜಿಲ್ಲಾ ಓಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ ಹಡಪದ, ರಾಘು ಕುಮಚಿ , ಓಂಕಾರ ತೋಟಗಿ, ಅನಿಲ ಪಾಟೀಲ , ರತನ ರಜಪೂತ , ಮಡಿವಾಳಿ ಗೋರವರ .ಪವನಕುಮಾರ ಅಕ್ಕಿ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು