ಮುಂದಗೋಡ

ಉರುಳಿಗೆ ಸಿಲುಕಿ ಬಿದ್ದಿದ್ದ ಕರಡಿಯ ರಕ್ಷಣೆ

ಉರುಳಿಗೆ ಸಿಲುಕಿ ಬಿದ್ದಿದ್ದ ಕರಡಿಯ ರಕ್ಷಣೆ


ಲೋಕದರ್ಶನ ವರದಿ 

ಮುಂಡಗೋಡ: ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಓರಲಗಿ ಅರಣ್ಯ ಪ್ರದೇಶದಲ್ಲಿ ಗುರುವಾರ ಉರುಳಿ(ಯಾರಿ ಬಳ್ಳಿ)ಗೆ ಸಿಲುಕಿ ಬಿದ್ದಿದ್ದ ಕರಡಿಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.   

ಓರಲಗಿ ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರು ಗಸ್ತು ತಿರುಗುತ್ತಿದ್ದಾಗ ಉರುಳಿಗೆ(ಯಾರಿ ಬಳ್ಳಿ) ಸಿಲುಕಿ ಕರಡಿಯೊಂದು ಒದ್ದಾಡುತ್ತಿರುವುದನ್ನು ನೋಡಿದ ಅರಣ್ಯ ರಕ್ಷಕರು ಕಾತೂರ ಆರ್‌ಎಫ್‌ಒ ಅಜಯ ನಾಯ್ಕ ಅವರಿಗೆ ತಿಳಿಸಿದ್ದಾರೆ. ನಂತರ ಬಂದ ಪಶು ವೈದ್ಯಾಧಿಕಾರಿ ಜಯಚಂದ್ರ ಕೆಂಪಶಿ ಹಾಗೂ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಅವರು ಕರಡಿಗೆ ಅರಿವಳಿಕೆ ಮದ್ದು ನೀಡಿದ್ದಾರೆ. ಕರಡಿಗೆ ಎಚ್ಚರವಾಗುವ ಮುನ್ನ ತುಂಬಾ ಜವಾಬ್ದಾರಿಯಿಂದ ತಮ್ಮ ಜೀವದ ಭಯ ತೊರೆದು ಉರುಳಿನಿಂದ ಕರಡಿಯನ್ನು ಬಿಡಿಸಿ ಅದಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಾಡಿಗೆ ತೆರಳುವ ಹಾಗೆ ಕಾರ್ಯಾಚರಣೆ ನಡೆಸಿದ್ದಾರೆ.   

ಎಸಿಎಫ್ ಶ್ರೀಶೈಲ ವಾಲಿ ಮತ್ತು ಆರ್‌ಎಫ್‌ಒ ಅಜಯ ನಾಯ್ಕ ಮಾರ್ಗದರ್ಶನದಲ್ಲಿ ಪಾಳಾ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ, ಅರಣ್ಯ ರಕ್ಷಕರಾದ ಶಿವಪ್ಪ, ಮಂಜುನಾಥ, ವಾಹನ ಚಾಲಕ ಕೃಷ್ಣ ಹಾಗೂ ಪಾಳಾ ಶಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು. 


ಸುದ್ದಿ ಓದಿ