ಅನಾರೋಗ್ಯದಿಂದಾಗಿ ಅಸ್ವಸ್ತಗೊಂಡ ಗೂಬೆ ರಕ್ಷಣೆ
ಮುಂಡಗೋಡ: ಅನಾರೋಗ್ಯದಿಂದಾಗಿ ತೀವ್ರ ಅಸ್ವಸ್ತಗೊಂಡಿದ್ದ (ಬಾರ್ನ ಓವಲ್)ಕಣಜ ಗೂಬೆಯನ್ನು ರಕ್ಷಿಸಿ ಅದಕ್ಕೆ ಚಿಕಿತ್ಸೆ ನೀಡಲಾದ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಇಲ್ಲಿಯ ಬಿ.ಎಸ್.ಎನ್.ಎಲ್ ಕಛೇರಿಯ ಮೇಲ್ಮಹಡಿ ಮೇಲೆ ಗೂಬೆ ತೀವ್ರ ಅಸ್ವಸ್ತಗೊಂಡು ಕುಳಿತಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ಶ್ರೀಧರ ಬಜಂತ್ರಿ, ಕಣಜ ಗೂಬೆಯನ್ನು ಸುರಕ್ಷಿತವಾಗಿ ಹಿಡಿದು ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದರು. ಈ ಸಂದರ್ಭದಲ್ಲಿ ಶಿವಪ್ಪ ಶರ್ಮಾ ಗೂಬೆ ಹಿಡಿಯುವಲ್ಲಿ ನೆರವಾದರು