ಪೈಗಂಬರ್ ಜನ್ಮದಿನಾಚರಣೆ : ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಮುಂಡರಗಿ 16 : ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯನ್ನು ಈದ್ ಮಿಲಾದ್ ಹಬ್ಬವೆಂದು ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಸ್ಥಳಿಯ ಮೌಲಾನಾ ಅಜಾದ್ ಫೌಂಡೇಶನ್ ಟ್ರಸ್ಟ್ ಮತ್ತು ಮೌಲಾನಾ ಅಜಾದ್ ಸ್ವಸಹಾಯ ಸಂಘದ ವತಿಯಿಂದ ಮುಂಡರಗಿ ತಾಲೂಕ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್್ಟನ ಅಧ್ಯಕ್ಷ ಇಸ್ಮಾಯಿಲ್ ನಮಾಜಿ, ಸಮಾಜ ಸೇವಕ ್ಘ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಶಹರ ಅಧ್ಯಕ್ಷ ಮೌಲಾಸಾಬ್ ಚಂದರಗಿ, ಉಪಾಧ್ಯಕ್ಷ ನಾಸಿರ್ಅಹಮದ್ ಅಳವಂಡಿ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪೂಜಾರ್, ಕಟ್ಟಡ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಡಿವೆಪ್ಪ ಚಲವಾದಿ, ಜಿಲ್ಲಾಧ್ಯಕ್ಷ ದೇವಪ್ಪ ಚಿಕ್ಕಣ್ಣವರ, ಕಿಸಾನ್ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ದ್ರುವಕುಮಾರ್ ಹೂಗಾರ್, ಹಸನಸಾಬ್ ಬಿಸನಳ್ಳಿ, ಮಂಜುನಾಥ ಕಟ್ಟಿಮನಿ, ಮಲಿಕ್ಸಾಬ್ ಚಿಕ್ಕಪ್ಪ, ಇಮ್ರಾನ್ ಬೇಪಾರಿ, ಖಾಜಾಮೈನು ಮುಂಡರಗಿ, ಇರ್ಫಾನ್ ಭಗವಾನ್, ಮೌಲಾಹುಸೇನ್ ಕವಲೂರ, ಹುಸೇನಪೀರ್ ಮೂರಿ್ಡ, ಮೆಹಬೂಬ್ ಯರಬಿನವರ ಮೊಹಮ್ಮದ್ರಫೀಕ್ ಉದ್ಯಾನವನ ಹಾಗೂ ಇತರರು ಇದ್ದರು.